ರಾಜ್ಯ

ಕಡೆಗೂ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ

Sumana Upadhyaya
ಬೆಂಗಳೂರು:   ಕಳೆದ ಎರಡು ತಿಂಗಳಲ್ಲಿ ಮಳೆಯ ಕೊರತೆಯಿಂದ ಕಂಗೆಟ್ಟು ಹೋಗಿದ್ದ ರಾಜ್ಯದ ಜನತೆಗೆ ಈ ತಿಂಗಳು ಸಾಕಷ್ಟು ಮಳೆ ಬಂದಿರುವುದರಿಂದ ಕೊಂಚ ನಿರಾಳರಾಗಿದ್ದಾರೆ. ಅಲ್ಲದೆ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಆದರೂ ಕೂಡ ನೀರಿನ ಮಟ್ಟ ಕಳೆದ ವರ್ಷ ಈ ಸಮಯಕ್ಕಿಂತ ಕಡಿಮೆಯಾಗಿದೆ. ಮುಂದಿನ ತಿಂಗಳು ಕೂಡ ರಾಜ್ಯದಲ್ಲಿ ಸರಾಸರಿ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಲಾಶಯಗಳ ನೀರಿನ ಮಟ್ಟ: ನಿನ್ನೆ ಮಂಡ್ಯದ ಕೆ.ಆರ್.ಸಾಗರ ಜಲಾಶಯದಲ್ಲಿ ನೀರಿನ ಒಳಹರಿವು 27,676  ಕ್ಯೂಸೆಕ್ಸ್ ಇದ್ದು, ಈ ವರ್ಷದಲ್ಲಿಯೇ ಅತ್ಯಂತ ಹೆಚ್ಚಾಗಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಕಡಿಮೆ ಮಳೆಯಿಂದಾಗಿ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ.
ಕಾವೇರಿ ಜಲಾನಯನದ ಇತರ ನದಿಗಳಲ್ಲಿ ಕೂಡ ನೀರಿನ ಒಳಹರಿವು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಅದು ಇನ್ನೂ ಹೆಚ್ಚಾಗುವ ಲಕ್ಷಣವಿದೆ. ಉತ್ತರ ಕರ್ನಾಟಕದಲ್ಲಿ ಭದ್ರಾ ಮತ್ತು ತುಂಗಭದ್ರಾ ಜಲಾಶಯಗಳಲ್ಲಿ ನೀರಿನ ಒಳಹರಿವು 20,524 ಆಗಿದೆ. ವಿಜಯಪುರದ ಆಲಮಟ್ಟಿ ಜಲಾಶಯದ ನೀರಿನ ಒಳಹರಿವು 35,224 ಕ್ಯೂಸೆಕ್ಸ್ ಆಗಿತ್ತು.
SCROLL FOR NEXT