ರಾಜ್ಯ

ಲಿಂಗಾಯಿತ ಧರ್ಮ ರಾಜಕೀಯ: ಯಡಿಯೂರಪ್ಪ ವಿರುದ್ಧ ಮೊಕದ್ದಮೆ ಹೂಡಲು ಎಂಬಿ ಪಾಟೀಲ್ ನಿರ್ಧಾರ

Raghavendra Adiga
ಬೆಂಗಳುರು: ಲಿಂಗಾಯಿತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನದ ವಿಚಾರವು ರಾಜ್ಯರಾಜಕೀಯದಲ್ಲಿ ಅಲೆಗಳನ್ನೆಬ್ಬಿಸಿದೆ. ಬಿಜೆಪಿಯ ಬಲವಾದ ಲಿಂಗಾಯಿತ ಮತ ಬ್ಯಾಂಕ್ ನ್ನು ಒಡೆದು ಕಾಂಗ್ರೆಸ್ ತಾನು ಲಾಭ ಮಾಡಿಕೊಳ್ಳುವ ಪ್ರಯತ್ನಗಳು ಸಾಗುತ್ತಿದೆ. ಈ ನಿಟ್ಟಿನಲ್ಲಿ  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಪ್ರತ್ಯೇಕ ಲಿಂಗಾಯಿತ ಧರ್ಮದ ಆಂದೋಲನವನ್ನು ಮುನ್ನಡೆಸುತ್ತಿರುವ ಜಲ ಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್ ನಡುವೆ ಸಣ್ಣ ಪ್ರಮಾಣದ ಸಮರ ಪ್ರಾರಂಭವಾಗಿದೆ.
ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕೆಂದು ಪಾಟೀಲ್ ಹೇಳಿದ್ದು ಇಬ್ಬರ ನಡುವಿನ ನಡೆಯುತ್ತಿರುವ ಕದನ ಕುತೂಹಲಕಾರಿ ಘಟ್ಟಕ್ಕೆ ತಿರುಗಿವೆ. ಯಡಿಯೂರಪ್ಪ ಅವರು "ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ರ "ಕಮಿಷನ್ ಏಜೆಂಟ್" ನಂತೆ ಕೆಲಸ ಮಾಡುತ್ತಿದ್ದಾನೆ" ಎಂದು ಆರೋಪಿಸಿದ್ದು ಈ ಆರೋಪಕ್ಕೆ ಯಡಿಯೂರಪ್ಪ  ಸೂಕ್ತ ದಾಖಲೆ ಒದಗಿಸಬೇಕು ಇಲ್ಲವೆ ಕಾನೂನು ಕ್ರಮ ಎದುರಿಸಬೇಕೆಂದು ಪಾಟೀಲ್ ಒತ್ತಾಯಿಸಿದ್ದಾರೆ.
"ಗುಂಡ್ಲುಪೇಟೆ ಮತ್ತು ನಂಜನಗೂಡಿನ ಉಪಚುನಾವಣೆ ಸಮಯದಿಂದಲೂ ಯಡಿಯೂರಪ್ಪ ನನ್ನ ವಿರುದ್ಧದ ಆರೋಪವನ್ನು ಮಾಡುತ್ತಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಶೋಚನೀಯವಾಗಿ ಸ್ಥಾನಗಳನ್ನು ಕಳೆದುಕೊಂಡಿದೆ. ಬಹುಶಃ  ಅವರಿಗೆ ನನ್ನ ಯಶಸ್ಸನ್ನು ಕಂಡು ಸಹಿಸಲಾಗುತ್ತಿಲ್ಲ,  ಅವರು ಚುನಾವಣೆಯಲ್ಲಿ ಸೋತದ್ದರ ಹತಾಶೆಯನ್ನು ಈ ಮುಖೇನ ತೋರಿಸುತ್ತಿದ್ದಾನೆ,
"ನನ್ನನ್ನು ಮುಖ್ಯಮಂತ್ರಿಗಳ  ‘ಕಮಿಷನ್‌ ಏಜೆಂಟ್‌ ಎಂದು ಟೀಕಿಸುತ್ತಿರುವ ಯಡಿಯೂರಪ್ಪ ಅವರಿಗೆ ವಕೀಲರ ಮೂಲಕ ಒಂದೆರಡು ದಿನಗಳಲ್ಲಿ ನೋಟಿಸ್‌ ಕೊಡಿಸಲಾಗುವುದು
"ಯಡಿಯೂರಪ್ಪ ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಕುರಿತು ವಕೀಲರ ತಂಡದ ಜತೆ ಚರ್ಚಿಸಿದ್ದೇನೆ. ಯಾವ ಪ್ರಕರಣದಡಿ ಮೊಕದ್ದಮೆ ದಾಖಲಿಸಬೇಕು ಎಂಬುದನ್ನು ಯೋಚಿಸಿ, ವಕೀಲರು ನಿರ್ಧರಿಸಲಿದ್ದಾರೆ" ಎಂದು ಪಾಟೀಲ್ ಹೇಳಿದ್ದಾರೆ.
SCROLL FOR NEXT