ಮೈಸೂರು: 'ಕಲಾಶ್ರೀ' ಶಂಖಗಳಿಂದ ಮಾಡಲ್ಪಟ್ಟ ಸುಂದರ ಶಿಲ್ಪಗಳ ರಚನೆಗಳಿರುವ ವಸ್ತು ಸಂಗ್ರಹಾಲಯವನ್ನು ಸಕ್ಕರೆ ಸಚಿವೆ ಗೀತಾ ಮಹಾದೇವಪ್ರಸಾದ್ ಮೈಸೂರಿನಲ್ಲಿ ಉದ್ಘಾಟಿಸಿದರು.
ಓರ್ವ ಕಲಾವಿದೆ ಮತ್ತು ವಸ್ತು ಸಂಗ್ರಹಾಲಯದ ಮಾಲೀಕರಾದ ರಾಧಾ ಮಲ್ಲಪ್ಪ ತಾಜ್ ಮಹಲ್, ಚರ್ಚ್ ಮತ್ತು ಇತರರ ರಚನೆಗಳನ್ನು, ವಿವಿಧ ದೇವತೆಗಳ ಶಿಲ್ಪಗಳನ್ನು ಶಂಖ ಹಾಗೂ ಕೋನ್ ಗಳನ್ನು ಬಳಸಿ ರಚಿಸಿದ್ದಾರೆ. ಈ ಸುಂದರ ಮಾದರಿಗಳನ್ನು ತಯಾರಿಸಲು ತನ್ನ ಇಡೀ ಜೀವನವನ್ನು ಸಮರ್ಪಿಸಿರುವ ರಾಧಾ ಶಂಖ ಹಾಗೂ ಕೋನ್ ಗಳನ್ನು ಬಳಸಿ 11 ಅಡಿ ಎತ್ತರದ ಗಣೇಶ ವಿಗ್ರಹವನ್ನು ತಯಾರಿಸಿದ್ದು ಇದು ಗಿನ್ನಿಸ್ ದಾಖಲೆ ಪುಸ್ತಕ ಸೇರಿದೆ.
ಕಳೆದ ಇಪ್ಪತ್ತೈದು ವರ್ಷಗಳಿಂದ ತಾನು ಈ ಕಲಾಕೃತಿ ರಚನೆಗಳಲ್ಲಿ ತೊದಗಿಸಿಕೊಂಡಿದ್ದೇನೆ ಎನ್ನುವ ರಾಧಾ ತಾಜ್ ಮಹಲ್ ರಚನೆಗಾಗಿ ಏಳು ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಹಾಗೆಯೇ ಚರ್ಚ್ ರಚನೆಗೆ ಎಂಟು ವರ್ಷ ಕೆಲಸ ಮಾಡಿದ್ದಾರೆ. "ನಾನು ಶಂಖ ಹಾಗೂ ಕೋನ್ ಗಳನ್ನು ಬಳಸಿ 160 ಕಲಾಕೃತಿಗಳನ್ನು ತಯಾರಿಸಲು ಒಟ್ಟಾರೆ ನಾಲ್ಕು ಕೋಟಿ ರೂ. ವ್ಯಯಿಸಿದ್ದೇನೆ. ಒಂದು ಶಂಖದ ಬೆಲೆ 8 ರೂ. ಇದೆ" ಎನ್ನುತ್ತಾರೆ.
ರಾಮೇಶ್ವರಂ, ಕನ್ಯಾಕುಮಾರಿ ಹಾಗೂ ವಿದೇಶಗಳಿಂದ ಶಂಖಗಳನ್ನು ತರಿಸಿಕೊಳ್ಳುವ ರಾಧಾ ಈ ಎಲ್ಲಾ ಮಾದರಿಗಳನ್ನು ರಚಿಸಲು ಸಾವಿರಾರು ಕೆಜಿ ಶಂಖಗಳನ್ನು ಬಳಸಿದ್ದಾರೆ. ಗಣೇಶನ ಮಾದರಿ ರಚನೆಯೊಂದಕ್ಕೇ 420 ಕೆಜಿ ಶಂಖಮತ್ತು ಕೋನ್ ಗಳನ್ನು ಬಳಸಲಾಗಿದೆ. "ಶಂಖಗಳನ್ನು ಬಳಸಿ ಪ್ರಪಂಚದ ಏಳು ಅದ್ಭುತಗಳ ರಚನೆಗಳನ್ನು ಮಾಡಲು ನಾನು ಬಯಸುತ್ತೇನೆ ಆದರೆ ನಮ್ಮ ವಸ್ತುಸಂಗ್ರಹಾಲಯದಲ್ಲಿ ಅವುಗಳನ್ನಿರಿಸಲು ಸ್ಥಳಾವಕಾಶವಿಲ್ಲ. ಹಾಗಾಗಿ ಈಗ, ಹೊಸ ಶಿಲ್ಪಗಳನ್ನು ರಚಿಸುವ ಯಾವುದೇ ಯೋಜನೆಯನ್ನು ನಾನು ಮಾಡಿಲ್ಲ" ರಾಧಾ ಹೇಳಿದ್ದಾರೆ.
ಈ ವಸ್ತುಸಂಗ್ರಹಾಲಯವು ಮೈಸೂರು ನಗರ ಕೇಂದ್ರದಿಂದ ಚಾಮುಂಡಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿದೆ. ಹೀಗಾಗಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಆಗಮಿಸುವುದಕ್ಕೆ ಅನುಕೂಲವಾಗಿದೆ. ಇದೇ ಮಾರ್ಗದಲ್ಲಿಯೇ ಪ್ರಸಿದ್ದ ಮರಳು ಶಿಲ್ಪಗಳ ವಸ್ತುಸಂಗ್ರಹಾಲಯವೂ ಇರುವುದು ಗಮನಾರ್ಹ ಸಂಗತಿ. ಒಟ್ಟಾರೆ ರಾಧಾ ಅವರ ಪರಿಶ್ರಮಕ್ಕೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics