ರಾಜ್ಯ

ಅಂಕಪಟ್ಟಿ ಖರೀದಿಯಲ್ಲಿ ಅವ್ಯವಹಾರ, ಉನ್ನತ ಶಿಕ್ಷಣ ಸಚಿವರ ವಿರುದ್ಧ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಆರೋಪ

Raghavendra Adiga
ಬೆಂಗಳೂರು: ವಿವಿಧ ವಿಶ್ವವಿದ್ಯಾನಿಲಯಗಳಿಗೆ ಖಾಲಿ ಅಂಕ ಪಟ್ಟಿಗಳನ್ನು ಖರೀದಿಸಲು ಬಹುಕೋಟಿ ರೂಪಾಯಿ ಹಗರಣವನ್ನು ನಡೆಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿರುದ್ಧ ಅವರದೇ ಪಕ್ಷದ ವಿದ್ಯಾರ್ಥಿಗಳ ಸಂಘಟನೆ ಆರೋಪ ಮಾಡಿದೆ.
ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿಗಳ ವಿಭಾಗ ನ್ಯಾಷನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್.ಎಸ್.ಯು.ಐ), ರಾಯರೆಡ್ಡಿ ಒಂದು ಸಂಸ್ಥೆಗೆ ಲಾಭ ಮಾಡಿ ಕೊಡುವ ಸಲುವಾಗಿ ಖಅಂಕ ಪಟ್ಟಿಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದೆ. ಎನ್ ಎಸ್ ಯುಐ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಸ್. ಮಂಜುನಾಥ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ವಿ. ವೇಣುಗೋಪಾಲ್ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದರು. "ಖಾಲಿ ಅಂಕ ಪಟ್ಟಿ ಖರೀದಿ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಸೂಚನೆ ನೀಡಬೇಕು". 2017 ರ ಮೇ 18 ರ ದಿನಾಂಕದ ಆವೃತ್ತಿಯಲ್ಲಿ ಅಂಕ ಪಟ್ಟಿ ಖರೀದಿ ಹಗರಣ ಕುರಿತಂತೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮೊದಲ ಬಾರಿಗೆ ವರದಿ ಪ್ರಕಟಿಸಿತ್ತು.
ಮುಂಬೈ ಮೂಲದ ಖಾಸಗಿ ಮಾರಾಟಗಾರರಿಗೆ ರಾಯರೆಡ್ಡಿ ಪರವಾಗಿರುವುದನ್ನು ನೀಡಿದ್ದು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಗೆ ಮುಂಬೈ ಕಂಪೆನಿಯಿಂದ ಅಂಕ ಪಟ್ಟಿಗಳನ್ನು   ಖರೀದಿಸುವಂತೆ ಒತ್ತಡ ಹಾಕಲಾಗಿದೆ.ಇದು ಪಾರದರ್ಶ್ನಕವಾದ ಟೆಂಡರ್ ನಿಯಮ, ನಿಬಂಧನೆಗಳನ್ನು ಉಲ್ಲಂಘಿಸಿದಂತಾಗಿದೆ.
ಎನ್ ಎಸ್ ಯುಐ ನ ರಾಜ್ಯಾಧ್ಯಕ್ಷರು ರಾಯರೆಡ್ಡಿ ತಕ್ಷಣ ಮಾರಾಟಗಾರರಿಗೆ ನೀಡಿದ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಮತ್ತು ವಿಶ್ವವಿದ್ಯಾನಿಲಯಗಳು ಮತ್ತು ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
SCROLL FOR NEXT