ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಕುಡಿತ ಮತ್ತಿನಲ್ಲಿ ಡಿಜಿ ಕಚೇರಿ ಕ್ಲರ್ಕ್ ನನ್ನು ಮಹಡಿಯಿಂದ ತಳ್ಳಿ ಹತ್ಯೆ

ವಿಕಾಸಸೌಧದಲ್ಲಿ ವಿಭಾಗ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ರಾಜು ಎಂಬಾತ ಪೊಲೀಸ್ ನಿರ್ದೇಶನಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಉದಯ್...

ಬೆಂಗಳೂರು: ವಿಕಾಸಸೌಧದಲ್ಲಿ ವಿಭಾಗ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ರಾಜು ಎಂಬಾತ ಪೊಲೀಸ್ ನಿರ್ದೇಶನಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಉದಯ್ ಕುಮಾರ್ ಎಂಬಾತನನ್ನು ಮಹಡಿಯ ಮೇಲಿನಿಂದ ತಳ್ಳಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
ರಾಜು ಎಂಬಾತ ಸಹೋದ್ಯೋಗಿ ವಿಠಲ್ ಜತೆ ಗೇಸ್ಟ್ ಹೌಸ್ ನಲ್ಲಿ ವಾಸವಾಗಿದ್ದ. ವಿಠಲ್ ಗೆ ನಂದಿನಿ ಲೇಔಟ್ ನಲ್ಲಿರುವ ಪೊಲೀಸ್ ಕ್ವಾಟರ್ಸ್ ನಲ್ಲಿ ಮನೆಯೊಂದು ಹಂಚಿಕೆಯಾಗಿರುತ್ತದೆ. ಇದರಿಂದಾಗಿ ವಿಠಲ್ ರಾಜುನನ್ನು ಕರೆದು ತನ್ನ ಜತೆ ನೆಲೆಸುವಂತೆ ಹೇಳಿದ್ದ. 
ಮೃತ ಉದಯ್ ಕುಮಾರ್ ಮಂಡ್ಯದ ಮದ್ದೂರು ಮೂಲದವರಾಗಿದ್ದು ಕೆಲಸ ನಿಮಿತ್ತ ವಿಠಲ್ ಗೆ ಪರಿಚಿತನಾಗಿದ್ದ. ಈ ಹಿನ್ನೆಲೆಯಲ್ಲಿ ಬುಧವಾರ ವಿಠಲ್ ಉದಯ್  ನನ್ನು ಮನೆಗೆ ಕರೆದಿದ್ದ. ಈ ವೇಳೆ ಉದಯ್ ಕ್ವಾಟರ್ಸ್ ಚಿಕ್ಕದಾಗಿದೆ ಇಲ್ಲಿ ಮೂವರು ಮಲಗಲು ಆಗುವುದಿಲ್ಲ ಎಂದು ಹೇಳಿದ್ದ ಇದರಿಂದ ರಾಜು ಮತ್ತು ಉದಯ್ ಮಧ್ಯೆ ವಾಗ್ವಾದ ನಡೆದಿತ್ತು. 
ಇದಾಗ ಬಳಿಕ ಮೂವರು ಕುಳಿತು ಮದ್ಯಪಾನ ಮಾಡಿದ್ದರೆ. ಈ ವೇಳೆ ಉದಯ್ ಇಲ್ಲಿಯೇ ಇರುವಂತೆ ವಿಠಲ್ ಹೇಳಿದಾಗ ಅದಕ್ಕೆ ರಾಜು ಕೆಟ್ಟದಾಗಿ ಮಾತನಾಡಿದ್ದಾನೆ. ಈ ವೇಳೆ ಮತ್ತೆ ರಾಜು ಮತ್ತು ಉದಯ್ ನಡುವೆ ಮಾತಿನ ಜಗಳ ಶುರುವಾಗಿದೆ. ಕುಡಿದ ಅಮಲಿನಲ್ಲಿ ರಾಜು ಉದಯ್ ನನ್ನು ತಳ್ಳಿದ್ದಾನೆ. ಉದಯ್ ಆಯಾ ತಪ್ಪಿ ಮೊದಲ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಈ ಘಟನೆ ಸಂಬಂಧ ಪೊಲೀಸರು ರಾಜುನನ್ನು ಬಂಧಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!