ಬೆಂಗಳೂರು: ಬಳ್ಳಾರಿ ಶಾಸಕ ಅನಿಲ್ ಲಾಡ್ ಮಾಲೀಕತ್ವದ ಕೆನರಾ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಅಕ್ರಮ ಗಣಿಗಾರಿಕೆ ನಡೆದಿರುವ ಆರೋಪದ ಮೇಲೆ ಶಾಸಕರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಅಕ್ರಮವಾಗಿ ಅದಿರು ಸಾಗಾಟ ನಡೆಸಿದ ಆರೋಪದದಡಿಯಲ್ಲಿ ಎಸ್‍ಐಟಿ ಎಫ್ ಐಆರ್ ದಾಖಲಿಸಿದೆ. 2010 ರಿಂದ 2 ವರ್ಷಗಳ ಕಾಲ ಪರವಾನಿಗೆ ಪಡಿಯದೇ 82 ಸಾವಿರ ಮೆಟ್ರಿಕ್ ಟನ್ ಅದಿರನ್ನು ಸಾಗಿಸಿದ ಸಂಬಂಧ ಪ್ರಕರಣ ದಾಖಲಾಗಿದೆ.
ಇದೀಗ ಪ್ರಕರಣ ದಾಖಲಿಸಿದ ಸ್ಐಟಿ ಐಜಿಪಿ ಚರಣ್ ರೆಡ್ಡಿ ದಾಖಲೆಗಳ ಸಂಗ್ರಹದಲ್ಲಿ ತೊಡಗಿದ್ದು ಒಟ್ಟಾರೆ 13 ಕೋಟಿ ರೂ. ಅಕ್ರಮ ನಡೆದಿದೆ ಎನ್ನಲಾಗಿದೆ.
ಬೇಲೆಕೇರಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಅನಿಲ್ ಲಾಡ್ 2015ರ ಜುಲೈನಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು. ಇದೀಗ ಮತ್ತೊಂದು ಪ್ರಕರಣದಲ್ಲಿಯೂ ಸಿಲುಕಿರುವ ಲಾಡ್ ರಿಂದಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತೀವ್ರ ಮುಜುಗರ ತಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics