ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ 2017ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಗೊಂಡಿದೆ. ಈ ಸಾಲಿನಲ್ಲಿ ಜೀವಮಾನದ ಸಾಧನೆ ಪ್ರಶಸ್ತಿಗೆ ಹಿರಿಯ ರಂಗಭೂಮಿ ಕಲಾವಿದ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50 ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ.
ಇನ್ನು ರಂಗನಟ ಚೌಡಪ್ಪ ದಾಸ್,ಗೆ ಕೆ.ಹಿರಣ್ಯಯ್ಯ ದತ್ತಿ ಪುರಸ್ಕಾರ, ನಿರ್ದೇಶಕ ಬಸವರಾಜ ಬೆಂಗೇರಿ ಅವರಿಗೆ ಚಿಂದೋಡಿ ವೀರಪ್ಪನವರ ದತ್ತಿ ಪ್ರಶಸ್ತಿ, ರಂಗಭೂಮಿ ನಟಿ ಮನೋರಂಜನ ಸಿಂಧೆ ಅವರಿಗೆ ಚಿಂದೋಡಿ ಲೀಲಾ ಪ್ರಶಸ್ತಿ, ಹಾಗೂ ನಟ ಮಾಯಿಗಯ್ಯ ಅವರನ್ನು ಕೆ.ರಾಮಚಂದ್ರಯ್ಯ ದತ್ತಿ ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ.ಈ ಎಲ್ಲಾ ಪುರಸ್ಕಾರಗಳೂ ಐದು ಸಾವಿರ ನಗದು ಬಹುಮಾನವನ್ನು ಹೊಂದಿವೆ.
ನಾಗೇಶ್ ಕಶ್ಯಪ್, ಎಲ್.ಎನ್.ಮುಕುಂದ್‌ರಾಜ್, ಮಂಡ್ಯ ರಮೇಶ್,ನಾಗಣಿ ಭರಣ ಸೇರಿ 25 ಮಂದಿಗೆ ಕಾಡೆಮಿಯ ವಾರ್ಷಿಕ ರಂಗಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗುತ್ತದೆ. ಈ ಪ್ರಶಸ್ತಿಗಳು ತಲಾ 25 ಸಾವಿರ ನಗದು ಪುರಸ್ಕಾರವನ್ನು ಹೊಂದಿದೆ.
ಪ್ರಶಸ್ತಿ ಪ್ರಧಾನ ಸಮಾರಂಭವು 2018ರ ಫೆಬ್ರುವರಿಯಲ್ಲಿ,ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅಕಾಡಮಿ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos