ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ರಾಯಚೂರು: ರಾಯಚೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಪರಿವರ್ತನಾ ರ್ಯಾಲಿ ಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಕನ್ನಡಕವನ್ನು ಕಳೆದುಕೊಂಡಿದ್ದಾರೆ.
ರಾಯಚೂರು ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರಿಗೆ ಹೂ ಮಾಲೆ ಹಾಕಿದ್ದ ವೇಳೆ ಈ ಘಟನೆ ನಡೆದಿದೆ. ಹಾಕಿದ ಹೂ ಮಾಲೆ ತೆಗೆಯುವಾಗ ಕನ್ನಡಕ ಕೆಳಗೆ ಬಿದ್ದಿದ್ದು ಮತ್ತೆ ಪತ್ತೆಯಾಗಿಲ್ಲ. ಕನ್ನಡಕವಿಲ್ಲದ ಕಾರಣ ರಾಯಚೂರು ನಗರದ ಧೂಳು ಭರಿತ ವಾತಾವರಣಕ್ಕೆ ಅವರ ಕಣ್ಣುಗಳು ಕೆಂಪಗಾಗಿದ್ದವು.
ಸದ್ಯ ಖಾಸಗಿ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಯಡಿಯೂರಪ್ಪ ಅವರಿಗೆ ಬದಲಿ ಕನ್ನಡಕ ತರಲು ಅವರ ಆಪ್ತ ಸಹಾಯಕ ಸಂತೋಷ್ ಬೆಂಗಳೂರಿಗೆ ತೆರಳಿದ್ದಾರೆ. ಇಂದು ಅವರು ಹೆಲಿಕಾಪ್ಟರ್ ನಲ್ಲಿ ಬಿಎಸ್ ವೈ ಅವರ ಕನ್ನಡಕ ತರುವವರಿದ್ದು ನಂತರ ಯಡಿಯೂರಪ್ಪ ಮಾಜಿ ಸಚಿವರಾದ ಸಿ.ಸಿ.ಪಾಟೀಲ್ ಕುಟುಂಬದವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.