ನಾಗರಿಕ ವಿಮಾನಯಾನ ಖಾತೆ ಸಚಿವ ಅಶೋಕ್ ಗಜಪತಿ ರಾಜು 
ರಾಜ್ಯ

ನವೀಕರಿಸಿದ ಹುಬ್ಬಳ್ಳಿ ವಿಮಾನ ನಿಲ್ದಾಣ ಉದ್ಘಾಟನೆ

ಪ್ರಾದೇಶಿಕ ಸ್ಥಳದಿಂದ ಬೇರೆ ರಾಜ್ಯ ಮತ್ತು ದೇಶಗಳಿಗೆ ಸಂಪರ್ಕ ಕಲ್ಪಿಸಲು ನವೀಕರಿಸಿದ ವಿಮಾನ ....

ಹುಬ್ಬಳ್ಳಿ: ಪ್ರಾದೇಶಿಕ ಸ್ಥಳದಿಂದ ಬೇರೆ ರಾಜ್ಯ ಮತ್ತು ದೇಶಗಳಿಗೆ ಸಂಪರ್ಕ ಕಲ್ಪಿಸಲು ನವೀಕರಿಸಿದ ವಿಮಾನ ನಿಲ್ದಾಣವನ್ನು ನಾಗರಿಕ ವಿಮಾನಯಾನ ಖಾತೆ ಸಚಿವ ಪಿ.ಅಶೋಕ್ ಗಜಪತಿ ರಾಜು ನಿನ್ನೆ ಅನಾವರಣಗೊಳಿಸಿದರು.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ಎರಡನೇ ಹಂತದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಸೇರಿಸಲಾಗಿದೆ. ಉಡಾನ್ ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣವಿರುವುದರಿಂದ ಈ ನವೀಕರಿಸಿದ ವಿಮಾನ ನಿಲ್ದಾಣವನ್ನು ದೇಶದ ಬೇರೆ ವಿಮಾನ ನಿಲ್ದಾಣಗಳಿಗೆ ಸಂಪರ್ಕಿಸಲಾಗುವುದು ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದರು.
ಬೆಂಗಳೂರಿನಿಂದ ವಾಯುವ್ಯ ಕಡೆಗೆ 410 ಕಿಲೋ ಮೀಟರ್ ದೂರದಲ್ಲಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ರಾಜ್ಯದ ಪ್ರಮುಖ ನಗರಗಳಾಗಿ ಅಭಿವೃದ್ಧಿಯಾಗುತ್ತಿವೆ.
ಪ್ರಸ್ತುತ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರತಿದಿನ ಎಟಿಆರ್ -72 ಮೂಲಕ ಒಂದು ವಿಮಾನ ಹಾರಾಟವಾಗುತ್ತದೆ.
ಬೆಂಗಳೂರಿನಿಂದ ಮುಂಬೈಗೆ ಹುಬ್ಬಳ್ಳಿ ಮೂಲಕ ಸಂಪರ್ಕಿಸುವ ಹೊಸ ಏರ್ ಇಂಡಿಯಾ ವಿಮಾನ ಎ-319ವನ್ನು ಉನ್ನತೀಕರಿಸಿದ ವಿಮಾನ ನಿಲ್ದಾಣ ಮೂಲಕ ಹಾರಿ ಬಿಡಲಾಯಿತು. ವಾರಕ್ಕೆ ಮೂರು ಬಾರಿ ವಿಮಾನ ಹಾರಾಟವಿದ್ದು ಅದರಲ್ಲಿ 160 ಪ್ರಯಾಣಿಕರು ಇರುತ್ತಾರೆ.
ಉನ್ನತೀಕರಿಸಿದ ವಿಮಾನ ನಿಲ್ದಾಣ ಎಬಿ-320 ವಿಮಾನವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
142 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ಉನ್ನತೀಕರಿಸಲಾಗಿದ್ದು ನಿಂತಿರುವ ಸೀಮ್ ಡಬಲ್ ನಿರೋಧಕ ಚಾವಣಿ ವ್ಯವಸ್ಥೆ, ಶಕ್ತಿ ಸಮರ್ಥ ಚಿಲ್ಲರ್ ಗಳು, ಕೊಳಚೆ ನೀರಿನ ಸಂಸ್ಕರಣ ಘಟಕ, ವೇರಿಯಬಲ್ ಆವರ್ತನ ಅಧಿಕ ಸಾಮರ್ಥ್ಯದ ಮೋಟಾರುಗಳನ್ನು ಹೊಂದಿರುತ್ತವೆ.
ಉನ್ನತೀಕರಿಸಿದ ವಿಮಾನ ನಿಲ್ದಾಣದ ವಿಸ್ತೀರ್ಣ 3,600 ಚದರಡಿ ಇದ್ದು ಜನದಟ್ಟಣೆ ಸಮಯದಲ್ಲಿ ಕೂಡ ಏಕಕಾಲಕ್ಕೆ 300 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. 
2016-17ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ಸುಮಾರು 25,928 ಪ್ರಯಾಣಿಕರನ್ನು ನಿಭಾಯಿಸುತ್ತಿತ್ತು. ಅನೇಕ ಸಣ್ಣ, ಮಧ್ಯಮ ಮತ್ತು ಅತಿದೊಡ್ಡ ಕೈಗಾರಿಕೆಗಳಿಗೆ ತವರಾಗಿರುವ ಹುಬ್ಬಳ್ಳಿ ರಾಜ್ಯದಲ್ಲಿ ಅತಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ನಗರಗಳಲ್ಲಿ ಒಂದು. ಪಶ್ಚಿಮ ಘಟ್ಟಗಳಿಗೆ ಸಮೀಪದಲ್ಲಿರುವುದರಿಂದ ಹುಬ್ಬಳ್ಳಿ-ಧಾರವಾಡ ಭಾಗಗಳು ಪ್ರವಾಸೋದ್ಯಮಕ್ಕೆ ಕೂಡ ಹೆಸರು ಮಾಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Watch| Traffic Fine ಗೆ ಶೇ.50 ರಷ್ಟು ರಿಯಾಯಿತಿ; ವಂಚಕರಿಂದ ಮೋಸಹೋದ ಟೆಕ್ಕಿ!; Dharmasthala Case: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ SIT ದಾಳಿ; ಮೊಬೈಲ್ ವಶಕ್ಕೆ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT