ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ತಿಮ್ಮಕ್ಕರನ್ನು ಸನ್ಮಾನಿಸಲಾಯಿತು
ಬೆಂಗಳೂರು: ರಾಜ್ಯ ಸರ್ಕಾರವು ತನ್ನ ಯೋಜನೆಗಳಿಗೆ ಸಾಲುಮರದ ತಿಮ್ಮಕ್ಕ ಹೆಸರನ್ನು ನೀಡಿದೆ, ಆದರೆ ತನ್ನ ಆರ್ಥಿಕ ಸ್ಥಿರತೆಯ ದೃಷ್ಟಿಯಿಂದ ಅವರಿಗೆ ಹೆಚ್ಚಿನ ಸಹಾಯ ಮಾಡಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶನಿವಾರದಂದು ಆಯೋಜಿಸಲಾಗಿದ್ದ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತಿಮ್ಮಕ್ಕನವರ ಪುತ್ರ ಉಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಾಜಕ್ಕೆ ನೀಡಿದ ಕೊಡುಗೆಯ ಹೊರತಾಗಿಯೂ ತಿಮ್ಮಕ್ಕ ಕೇವಲ 500 ರೂ. ಪಿಂಚಣಿ ಪಡೆಯುತ್ತಿದ್ದಾರೆ ಎಂದು ಉಮೇಶ್ ಹೇಳಿದರು "ತಿಮ್ಮಕ್ಕನಿಗೆ ಸ್ವಂತ ಮನೆ ಇಲ್ಲ, ಜೀವನಕ್ಕಾಗಿ ಸಾಕಷ್ಟು ಹಣವನ್ನು ಹೊಂದಿಲ್ಲ. ಅವರು ಕೇವಲ 500 ರೂ. ಪಿಂಚಣಿ ಪಡೆಯುತ್ತಾರೆ, "ಸರ್ಕಾರವು ಕ್ರಿಕೆಟಿಗರಿಗೆ ಮತ್ತು ಕಲಾವಿದರಿಗೆ ಕೋಟಿ ಕೋಟಿ ಹಣ ನಿಡುತ್ತದೆ. ಯಾವ ಪಕ್ಷ ಅಧಿಕಾರದಲ್ಲಿದೆ ಎಂಬ ಪ್ರಶ್ನೆಯಲ್ಲ. ಆದರೆ ತಿಮ್ಮಕ್ಕನಂತಹಾ ವ್ಯಕ್ತಿಯನ್ನು ಹೇಗೆ ಪರಿಗಣಿಸುತ್ತದೆ ಎನ್ನುವುದು ಪ್ರಶ್ನೆ" ಅವರು ಹೇಳಿದರು
ಸಮಾರಂಭದಲ್ಲಿದ್ದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಉಮೇಶ ಅವರ ಮಾತುಗಳಿಗೆ ಪ್ರತಿಕ್ರಯಿಸಿದ್ದು ತಿಮ್ಮಕ್ಕ ಅವರಿಗೆ ಐದು ಎಕರೆ ಜಮೀನು ಮಂಜೂರು ಮಾಡಿ ಅಲ್ಲೆ ಸರ್ಕಾರಿ ನರ್ಸರಿ ಹಾಗೂ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಉಮೇಶ್ ಮಾಗಡಿ ಅಥವಾ ಬೆಂಗಳೂರಿನಲ್ಲಿ ಭೂಮಿ ಹೊಂದಲು ಇಚ್ಚಿಸಿದ್ದಾರೆ. ಬೆಂಗಳೂರಿನ ಸುತ್ತಲೂ ಭೂಮಿಯ ಬೆಲೆ ದುಬಾರಿಯಾಗಿದೆ. ಅದೇ ಅವರು ನನ್ನ ಕ್ಷೇತ್ರವಾದ ಚಿತ್ರದುರ್ಗದಲ್ಲಿ, ಭೂಮಿ ಬಯಸಿದರೆ ಐದು ಎಕರೆ ಅಲ್ಲ 10 ಎಕರೆಯನ್ನು ನೀಡಲು ಸಿದ್ದವಿದ್ದೇವೆ. ಆಂಜನೇಯ ಹೇಳಿದ್ದಾರೆ.