ರಾಜ್ಯ

ಅರ್ಹತೆ ಆಧಾರದ ಮೇರೆಗೆ ಶಿಕ್ಷಕರಿಗೆ ಬಡ್ತಿ ನೀಡಲು ಸರ್ಕಾರ ನಿರ್ಧಾರ

Manjula VN
ಬೆಂಗಳೂರು: ಶಿಕ್ಷಣದ ಆರ್ಹತೆ ಮೇರೆಗೆ ಶಿಕ್ಷಕರಿಗೆ ಬಡ್ತಿ ನೀಡಲು ಇದೇ ಮೊದಲ ಬಾರಿಗೆ ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. 
ಶಿಕ್ಷಕರಿಗೆ ಬಡ್ತಿ ನೀಡಲು ನಿರ್ಧರಿಸಿರುವ ಸರ್ಕಾರ, ಇದಕ್ಕಾಗಿ ಹೊಸ ನಿಯಮಾವಳಿಯೊಂದನ್ನು ರೂಪಿಸಿದೆ ಎಂದು ಸಚಿವ ತನ್ವೀರ್ ಸೇಠ್ ಅವರು ಹೇಳಿದ್ದಾರೆ. 
ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಸುಮಾರು 12,000 ಶಿಕ್ಷಕರು ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಶಿಕ್ಷಕರ ವಿದ್ಯಾರ್ಹತೆ ಮೇರೆಗೆ ಬಡ್ತಿ ನೀಡಲು ನಿರ್ಧರಿಸಿದೆ. 
ಪ್ರೌಢಶಾಲಾ ಶಿಕ್ಷಕರನ್ನು ಪದವಿ ಪೂರ್ವ ಕಾಲೇಜುಗಳಿಗೆ ನೇಮಕ ಮಾಡುವ ಪ್ರಕ್ರಿಯೆಗಳನ್ನು 2012ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಇದೀಗ ಮತ್ತೆ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲು ಇಲಾಖೆ ನಿರ್ಧರಿಸಿದೆ. ರಾಜ್ಯ ಸರ್ಕಾರದ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಅರ್ಹತೆ ಆಧಾರದ ಮೇಲೆ ಇನ್ನು ಮುಂದೆ ಕಾಲೇಜುಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಅರ್ಹತೆ ಆಧಾರದ ಮೇರೆಗೆ ಬಡ್ತಿಯನ್ನು ನೀಡಲಾಗುತ್ತದೆ. 
ಪದವಿ ಶಿಕ್ಷಣ ಪೂರ್ಣಗೊಳಿಸಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಬಡ್ತಿ ನೀಡಲಾಗುತ್ತದೆ. ಅರ್ಹತಾ ಪರೀಕ್ಷೆ ಮೂಲಕ ಬಡ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ತನ್ವೀರ್ ಸೇಠ್ ಅವರು ವಿವರಿಸಿದ್ದಾರೆ. 
SCROLL FOR NEXT