ರಾಜ್ಯದ ಟ್ರಾಫಿಕ್ ಪೋಲೀಸರಿನ್ನು ಸ್ಮಾರ್ಟ್, ದಂಡ ವಸೂಲಿಗಾಗಿ ಪೇಟಿಎಂ ವ್ಯಾಲೆಟ್ ಬಳಕೆ
ಬೆಂಗಳೂರು: ಇದು ಡಿಜಿಟಲ್ ಯುಗ. ಎಲ್ಲವೂ ಆನ್ ಲೈನ್ ನಲ್ಲೇ ವ್ಯವಹಾರ. ಇದಕ್ಕೀಗ ಟ್ರಾಫಿಕ್ ಫೈನ್ ಸಹ ಹೊರತಲ್ಲ. ರಾಜ್ಯದಾದ್ಯಂತ ಟ್ರಾಫಿಕ್ ಪೋಲೀಸರು ಶೀಘ್ರದಲ್ಲೇ ಡಿಜಿಟಲ್ ಫೈನ್ ಕಲೆಕ್ಷನ್ ಪ್ರಾರಂಭಿಸಲಿದ್ದಾರೆ. ನೀವೇನಾದರೂ ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ನಿಮ್ಮ ಪೇಟಿಎಂ ವ್ಯಾಲೆಟ್ ನಿಂದಲೇ ದಂಡವನ್ನು ಪಾವತಿಸಬಹುದು. ಇನ್ನು ಮುಂದೆ ಡೆಬಿಟ್ ಕಾರ್ಡ್ ಅಥವಾ ಇ ವ್ಯಾಲೆಟ್ ಮುಖಾಂತರ ದಂದವನ್ನು ಸಂಗ್ರಹಿಸಲು ಸಂಚಾರಿ ಪೋಲೀಸರಿಗೆ ಅವಕಾಶ ನೀಡಲಾಗುತ್ತದೆ ಎಂದು ಹಿರಿಯ ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
"ವರ್ಷಾಂತದ ವೇಳೆಗೆ ಟೆಂಡರ್ ಗಳನ್ನು ಅಂತಿಮಗೊಳಿಸಲಾಗುತ್ತದೆ. ಹೆಚ್ಚುವರಿ ಸೇವಾ ಶುಲ್ಕವಿಲ್ಲದೆ ಪೇಟಿಎಂ ನಿಂದ ದಂಡ ಪಾವತಿಸುವ ವ್ಯವಸ್ಥೆಯನ್ನು ನಾವು ಜಾರಿಗೆ ತರಲಿದ್ದೇವೆ. ಆದಾಗ್ಯೂ, ಕಾರ್ಡ್ ಗಳ ಪಾವತಿಗಾಗಿ, ಸಹ ಅವಕಾಶವಿದೆದ್, " ಐಜಿಪಿ ಹಾಗೂ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತಾ ವಿಭಾಗದ ಕಮೀಷನರ್ ಡಿ.ರೂಪಾ, ಹೇಳಿದರು. "ನಾವು ಮುಂದಿನ ವರ್ಷ ಫೆಬ್ರವರಿಯಲ್ಲಿ ನೂತನ ವ್ಯವಸ್ಥೆ ಜಾರಿಗೆ ತರಬೇಕೆಂದು ಭಾವಿಸುತ್ತೇವೆ. ಇದು ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಉಳಿದೆಲ್ಲಾ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ" ರೂಪಾ ಹೇಳಿದ್ದಾರೆ.
ಈ ವ್ಯವಸ್ಥೆಯಲ್ಲಿ ಹ್ಯಾಂಡ್ ಹೆಲ್ಡ್ ಸಾಧನಗಳಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಸಂಕೇತವನ್ನು ಸ್ಕ್ಯಾನ್ ಮಾಡುವ ಮೂಲಕ ಸ್ಮಾರ್ಟ್ ಫೋನ್ ಸಹಾಯದಿಂದ ದಂಡವನ್ನು ಪಾವತಿಸಬಹುದು. ಹಣವು ಸಾರ್ವಜನಿಕರಪೇಟಿಎಂ ವ್ಯಾಲೆಟ್ ನಿಂದ ಅಧಿಕಾರಿಗಳ ಖಾತೆಗೆ ಜಮೆ ಆಗುತ್ತದೆ. ಬೆಂಗಳೂರಿನಲ್ಲಿ ಇದಾಗಲೇ ಟ್ರಾಫಿಕ್ ಪೋಲೀಸರು ಕಾರ್ಡ್ ಪೇಮೆಂಟ್ ಮೂಲಕ ದಂಟ ವಸೂಲಿ ನಡೆಸಿದ್ದು ಸಾಕಷ್ಟು ಜನಪ್ರಿಯವೂ ಆಗಿದೆ. ಇದಕ್ಕಾಗಿ 625 ಮೆಷಿನ್ ಗಳನ್ನು ಟ್ರಾಫಿಕ್ ಪೋಲೀಸರಿಗೆ ಒದಗಿಸಲಾಗಿದೆ. ನವೆಂಬರ್ ಅಂತ್ಯದ ವರೆಗೆ ಕಾರ್ಡ್ ಮುಖೇನ 1.82 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.