ರಾಜ್ಯ

ಬೆಂಗಳೂರು: ಬಿಟ್ ಕಾಯಿನ್ ಮೂಲಕವೇ ವಿವಾಹದ ಉಡುಗೊರೆ ಸ್ವೀಕರಿಸಿದ ನವದಂಪತಿ

Manjula VN
ಬೆಂಗಳೂರು: ಬಿಟ್ ಕಾಯಿನ್'ನಂತಹ ಡಿಜಿಟಲ್ ಕರೆನ್ಸಿ ಬಗ್ಗೆ ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕುಗಳು ಆತಂಕ ವ್ಯಕ್ತಪಡಿಸುತ್ತಿರುವಾಗಲೇ ದೇಶದ ಐಟಿ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ನವಜೋಡಿಯೊಂದು ಬಿಟ್ ಕಾಯಿನ್ ಮೂಲಕವೇ ವಿವಾಹದ ಉಡುಗೊರೆಯನ್ನು ಸ್ವೀಕರಿಸುವ ಮೂಲಕ ಸುದ್ದಿ ಮಾಡುತ್ತಿದ್ದಾರೆ. 
ಸಾಫ್ಟ್'ವೇರ್ ಉದ್ಯಮಿಗಳಾಗಿರುವ ಪ್ರಶಾಂತ್ ಶರ್ಮಾ ಹಾಗೂ ನೀತಿ ಶ್ರೀ ಅವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೂಮಾರು 200 ಅತಿಥಿಗಳ ಪೈಕಿ ಶೇ.95ರಷ್ಟು ಮಂದಿ ಬಿಟ್ ಕಾಯಿನ್ ಮೂಲಕವೇ ನವಜೋಡಿಗಳಿಗೆ ಮುಯ್ಯಿ ಹಾಕಿದ್ದಾರೆ. 
ಉಳಿದ ಶೇ.5ರಷ್ಟು ಮಂದಿ ಮಾತ್ರ ಎಂದಿನಂತೆ ಸಾಂಪ್ರದಾಯಿಕ ರೀತಿಯಲ್ಲಿ ಉಡುಗೊರೆಗಳನ್ನು ಕೊಟ್ಟಿದ್ದಾರೆ. ಈ ಮೂಲಕ ಬಿಟ್ ಕಾಯಿನ್ ಗಿಫ್ಟ್ ಪಡೆದು ಮದುವೆ ಮಾಡಿಕೊಂಡ ದೇಶದ ಮೊದಲ ಜೋಡಿ ಎಂಬ ಖಅಯಾತಿಗೆ ಪ್ರಶಾಂತ್ ಹಾಗೂ ನೀತಿ ಪಾತ್ರರಾಗಿದ್ದಾರೆ. 
ಪ್ರಶಾಂತ್ ಹಾಗೂ ನೀತಿಯವರು ಈಗಾಗಲೇ ಬಿಟ್ ಕಾಯಿನ್'ನಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ. ತಮ್ಮ ವಿವಾಹ ಸಮಾರಂಭಕ್ಕೆ ಬರುವವರಿಗೆ ಈ ಕರೆನ್ಸಿಯ ಪರಿಯ ಮಾಡಿಸಿ, ಅದನ್ನೂ ಒಂದು ಉಡುಗೊರೆ ಆಯ್ಕೆಯಾಗಿಸುವ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಮಾಡಿದ್ದಾರೆ. 
ಭವಿಷ್ಯದಲ್ಲಿ ನೀಡಲಾಗುವ ಉಡುಗೊರೆಯೊಂದಿಗೆ ತಂತ್ರಜ್ಞಾನವನ್ನು ಜೋಡಣೆ ಮಾಡುವ ಕುರಿತಂತೆ ನಾವು ಚಿಂತನೆ ನಡೆಸಿದ್ದೆವು. ಹೀಗಾಗಿ ಬಿಟ್ ಕಾಯಿನ್ ಬಗ್ಗೆ ನಮ್ಮ ಪೋಷಕರಿಗೆ ವಿವರಿಸಿದ್ದೆವು. ನಮ್ಮ ಈ ಆಲೋಚನೆಯನ್ನು ಪೋಷಕರು ಒಪ್ಪಿದರು ಎಂದು ಪ್ರಶಾಂತ್ ಶರ್ಮಾ ಅವರು ಹೇಳಿದ್ದಾರೆ. 
SCROLL FOR NEXT