ಸಾಂಕೇತಿಕ ಚಿತ್ರ 
ರಾಜ್ಯ

ಪತ್ನಿ ಮನೆಗೆ ಬರದಿದ್ದರಿಂದ ಬೇಸತ್ತು ಪತಿ ಆತ್ಮಹತ್ಯೆಗೆ ಶರಣು

ಪತ್ನಿಯ ತವರು ಮನೆಯಲ್ಲಿ ಉಂಟಾದ ಕಲಹದಿಂದ ಬೇಸತ್ತು 28 ವರ್ಷದ ....

ಬೆಂಗಳೂರು: ಪತ್ನಿಯ ಜೊತೆ ಆಕೆಯ ತವರು ಮನೆಯಲ್ಲಿ ಉಂಟಾದ ಕಲಹದಿಂದ ಬೇಸತ್ತು 28 ವರ್ಷದ ವಿವಾಹಿತ ತರುಣ ಆತ್ಮಹತ್ಯೆ ಮಾಡಿಕೊಂಡ ಘಟನೆ ತಲಘಟ್ಟಪುರದಲ್ಲಿ ಮೊನ್ನೆ ಶನಿವಾರ ನಡೆದಿದೆ. 
ತಲಘಟ್ಟಪುರದ ತುರಹಳ್ಳಿಯ ವೀರಭದ್ರ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಖಾಸಗಿ ಫೈನಾನ್ಸ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಶಕುಂತಲಾ ಎಂಬುವವರನ್ನು ವಿವಾಹವಾಗಿದ್ದು ದಂಪತಿಗೆ ಮಗು ಇದೆ.
ಮೊನ್ನೆ ಶನಿವಾರ ರಾತ್ರಿ 8.30ರ ಸುಮಾರಿಗೆ ದುರ್ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ಶಕುಂತಲಾ ತನ್ನ ಪತಿಗೆ ಕರೆ ಮಾಡಲು ಯತ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಗೆ ಬಂದು ನೋಡಿದಾಗ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು. ಕೂಡಲೇ ತಲಘಟ್ಟಪುರ ಪೊಲೀಸರಿಗೆ ಶಕುಂತಲಾ ದೂರು ನೀಡಿದರು.
ಯಾವುದೇ ಆತ್ಮಹತ್ಯೆ ನೋಟುಗಳನ್ನು ವೀರಭದ್ರ ಬರೆದಿಟ್ಟಿಲ್ಲ. ಮೊನ್ನೆ ಶನಿವಾರ ಕುಮಾರಸ್ವಾಮಿ ಲೇ ಔಟ್ ನಲ್ಲಿರುವ ತನ್ನ ಅತ್ತೆ ಮನೆಗೆ ಹೋಗಿದ್ದ ಸಂದರ್ಭದಲ್ಲಿ ವೀರಭದ್ರಗೆ ಪತ್ನಿಯ ಜೊತೆ ಜಗಳವಾಗಿತ್ತು. ಕೆಲ ತಿಂಗಳ ಹಿಂದೆ ವೀರಭದ್ರ ಅವರಿಂದ ಬೇರ್ಪಟ್ಟು ತವರು ಮನೆಗೆ ಹೋಗಿದ್ದ ಶಕುಂತಲಾಳನ್ನು ವಾಪಸ್ ಕರೆಸಲೆಂದು ಪೊಲೀಸರ  ಮೂಲಕ ರಾಜಿ ಸಂಧಾನ ಮಾಡಲು ವೀರಭದ್ರ ಹೋಗಿದ್ದರು. ಮನೆಗೆ ವಾಪಸ್ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀರಭದ್ರ ಪೊಲೀಸ್ ಠಾಣೆಯಲ್ಲಿ ಪತ್ನಿಗೆ ಬೆದರಿಕೆ ಕೂಡ ಹಾಕಿದ್ದರು.
ಆದರೆ ಶಕುಂತಲಾ ಪತಿಯ ಜೊತೆ ಹೋಗಲು ನಿರಾಕರಿಸಿದ್ದಳು. ದಿನಾ ಕುಡಿದು ಬಂದು ಗಲಾಟೆ ಮಾಡಿ ತನ್ನ ಮೇಲೆ ಗಂಡ ಹಲ್ಲೆ ಮಾಡುತ್ತಿದ್ದು ಇದರಿಂದ ಬೇಸತ್ತು ತವರು ಮನೆಗೆ ಹೋಗಿರುವುದಾಗಿ ಶಕುಂತಲಾ ಪೊಲೀಸರಿಗೆ ತಿಳಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT