ಬೆಳಗಾವಿ: ಬಡತನ ಮತ್ತು ಒತ್ತಡದಿಂದಾಗಿ ಒಬ್ಬರ ನಂತರ ಮತ್ತೊಬ್ಬರಂತೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕುಟುಂಬ ಇಬ್ಬರು ಮಹಿಳೆಯರು ಭಾನುವಾರ ಬೆಳಗಾವಿಯ ಗಾಂಧಿನಗರದಲ್ಲಿ ಚಲಿಸುವ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿದ್ದಾರೆ.
ನಿನ್ನೆ ಆತ್ಮಹತ್ಯೆಗೆ ಶರಣಾದ ಮಹಿಳೆಯರನ್ನು ಮಾಲಿಗಲ್ಲಿಯ ರುಕ್ಮಿಣಿ ಶ್ಯಾಮಸುಂದರ್ ನಾಗವಕರ್(60) ಹಾಗೂ ಆಕೆ ಮಗಳು ಗಣೇಶಪುರದ ಸರಿತಾ ಗಣೇಶ್ ಬುಲ್ಬುಲೆ(30) ಎಂದು ಗುರುತಿಸಲಾಗಿದೆ.
ಕಳೆದ ಶನಿವಾರ ರುಕ್ಮಿಣಿಯ ಎರಡನೇ ಪುತ್ರ ಸಂತೋಶ್ ನಾಗವಕರ್ ಅವರು ಸಹ ಬೆಳಗಾವಿಯ ತಿಲಕ್ ವಾಡಿಯ ರೈಲ್ವೆ ಗೇಟ್ ಬಳಿ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇನ್ನು ನಾಲ್ಕು ತಿಂಗಳ ಹಿಂದಷ್ಟೇ ರುಕ್ಮಿಣಿ ಹಿರಿಯ ಪುತ್ರ ಸಚಿನ್ ನಾಗವಕರ್ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ, ರುಕ್ಮಿಣಿ ಪತಿ ಶ್ಯಾಮಸುಂದರ್ ನಾಗವಕರ್ ಅವರು ನಿಧನರಾದ ನಂತರ ಕುಟುಂಬದ ರುಕ್ಮಿಣಿ ಮೇಲೆ ಬಿದ್ದಿತ್ತು. ರುಕ್ಮಿಣಿ ತನ್ನ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣಮಕ್ಕಳನ್ನು ಸಾಕಲು ಸಾಕಷ್ಟು ಹಣಕಾಸಿನ ತೊಂದರೆ ಅನುಭವಿಸುತ್ತಿದ್ದರು. ರುಕ್ಮಿಣಿ ಕುಟುಂಬ ನಿರ್ವಹಣೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರಿಂದ ಅದನ್ನು ಮರುಪಾವತಿಸಲು ಸಾಧ್ಯವಾಗದೇ ತೀವ್ರ ಒತ್ತಡಕ್ಕೆ ಸಿಲುಕಿದ್ದರು. ಹೀಗಾಗಿ ಒಬ್ಬರ ನಂತರ ಒಬ್ಬರು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics