ಕೊಪ್ಪಳ: ಬುಧವಾರ ಮಧ್ಯಾಹ್ನ ಕೊಪ್ಪಳದ ರಾಷ್ಟ್ರೀಯ ಹೆದ್ದಾರಿ ಮನ ಕಲಕುವಂತ ಸನ್ನಿವೇಶಕ್ಕೆ ಸಾಕ್ಷಿಯಾಯಿತು, ಬೈಸಿಕಲ್ ತುಳಿದುಕೊಂಡು ಹೋಗುತ್ತಿದ್ದ 17 ವರ್ಷದ ಅನ್ವರ್ ಅಲಿಗೆ ಕೆಎಸ್ ಆರ್ ಟಿಸಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆಯಿತು. ತೀವ್ರ ಗಾಯಗಳಿಂಗ ನರಳುತ್ತಿದ್ದ ಆತ ತಾನು ಬದುಕಬೇಕು, ನನ್ನನ್ನು ಆಸ್ಪತ್ರೆಗೆ ಸೇರಿಸಿ ಎಂದು ಸಹಾಯಕ್ಕಾಗಿ ಅಂಗಲಾಚಿದರೂ ಯಾರೋಬ್ಬರು ಆತನ ನೆರವಿಗೆ ಬರಲಿಲ್ಲ.
ದಾರಿಹೋಕರನ್ನು ನೆರವು ನೀಡುವಂತೆ ಕೇಳಿದರು ತಕ್ಷಣ ಯಾರೋಬ್ಬರು ಸಹಾಯಕ್ಕೆ ಧಾವಿಸಲಿಲ್ಲ, ಕೆಲವರು ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಆತ ಕೂಗಾಡುವುದನ್ನು ವಿಡಿಯೋ ಮಾಡುತ್ತಾ ಮಾನವೀಯತೆ ಮರೆತವರಂತೆ ವರ್ತಿಸುತ್ತಿದ್ದರು.
ಅಪಘಾತವಾದ ಕೆಲ ಗಂಟೆಗಳ ನಂತರ ಅನ್ವರ್ ಅಲಿಯನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ಗಾಯಗಳಿಂದ ನರಳುತ್ತಿದ್ದ ಅಲಿ ಸಂಜೆ ವೇಳೆಗೆ ಸಾವನ್ನಪ್ಪಿದ.
ಯುವಕನನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ್ದರೇ ಆತ ಬದುಕುತ್ತಿದ್ದ ಎಂದು ಪ್ರತ್ಯಕ್ಷದರ್ಶಿ ವೆಂಕಟೇಶ್ ರಾವ್ ಎಂಬುವರು ಹೇಳಿದ್ದಾರೆ. ಕೊಪ್ಪಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲವು ಗಾಯಗಳಿಂದ ನರಳುತ್ತಿದ್ದ ಬಾಲಕ, ಅಪಘಾತವಾಗ ಆಘಾತದಿಂದಾಗಿ, ರಕ್ತ ಸಂಚಾರ ಸರಿಯಾಗಿ ಆಗದೇ ಮೃತ ಪಟ್ಟಿದ್ದಾನೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ತಿಳಿಸಿದ್ದಾರೆ.