ಗುಲ್ಬರ್ಗ: ಸುರಕ್ಷಿತ ವಾಹನ ಚಾಲನೆಯ ಪ್ರಾಮುಖ್ಯತೆಯನ್ನು ತಿಳಿಸಲು ಮತ್ತು ಆ ನಿಟ್ಟಿನಲ್ಲಿ ಜನತೆಯಲ್ಲಿ ಜಾಗೃತಿ ಮೂಡಿಸಲು ಗುಲ್ಬರ್ಗಾದಲ್ಲಿ ಮಕ್ಕಳು ದ್ವಿಚಕ್ರ ವಾಹನ ಸವಾರರಿಗೆ ಕಂಪು ಗುಲಾಬಿ ನೀಡಿದರು.
ಹೆಲ್ಮೆಟ್ ಧರಿಸದಿರುವ ಸವಾರರನ್ನು ತಡೆದು ನಿಲ್ಲಿಸಿದ ಮಕ್ಕಳು ಅವರಿಗೆ ಗುಲಾಬಿ ಕೊಟ್ಟು ಸುರಕ್ಷತೆಗೆ ಹೆಲ್ಮೆಟ್ ಧರಿಸುವ ಅಗತ್ಯದ ಬಗ್ಗೆ ಮನವರಿಕೆ ಮಾಡಿದರು.ಸಾರ್ವಜನಿಕ ಅರಿವು ಕಾರ್ಯಕ್ರಮದ ಅಂಗವಾಗಿ ಈ ಅಭಿಯಾನ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಜಯ ಪ್ರಕಾಶ್ ತಿಳಿಸಿದ್ದಾರೆ.
ಭಾರತದಲ್ಲಿ ಪ್ರತಿ 4 ನಿಮಿಷಕ್ಕೊಮ್ಮೆ ರಸ್ತೆ ಅಪಘಾತದಲ್ಲಿ ಒಬ್ಬರು ಸಾಯುತ್ತಿದ್ದಾರೆ. ಅದರಲ್ಲಿ ಶೇಕಡಾ 25ರಷ್ಟು ದ್ವಿಚಕ್ರ ವಾಹನ ಸವಾರರಾಗಿದ್ದಾರೆ. 2016ರಲ್ಲಿ ದ್ವಿಚಕ್ರ ವಾಹನದಲ್ಲಿ ಒಟ್ಟು 2,784 ಅಪಘಾತಗಳು ಸಂಭವಿಸಿದ್ದು ಅವುಗಳಲ್ಲಿ 101 ಮಾರಣಾಂತಿಕ ಅಪಘಾತಗಳಾಗಿ 104 ಜನ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos