ರಾಜ್ಯ

ಬಿಡಿಎ ನಿವೇಶನಕ್ಕಾಗಿ ಕಾದು ಕಾದು ಮರಣ ಹೊಂದಿದ ತಂದೆ; ಉದ್ಯೋಗ ಬಿಟ್ಟು ಕಾಯುತ್ತಿರುವ ಮಗಳು!

Shilpa D

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ಸರ್ಕಾರ ಹಂಚಿಕೆ ಮಾಡಿರುವ ನಿವೇಶನದ ಸ್ವಾಧೀನಕ್ಕಾಗಿ ಕಾದು ಕಾದು 72 ವರ್ಷದ ವಯೋವೃದ್ಧರು ಕಳೆದ ನಾಲ್ಕು ತಿಂಗಳ ಹಿಂದೆ ಮೃತ ಪಟ್ಟಿದ್ದಾರೆ, ಆ ನಿವೇಶನವನ್ನ ಪಡೆಯಲೇಬೇಕೆಂದು ಪಣ ತೊಟ್ಟಿರುವ ಮೃತ ವೃದ್ಧರ ಮಗಳು ತಮ್ಮ ಉದ್ಯಗವನ್ನು ಬಿಟ್ಟು ನಿವೇಶನ ಪಡೆಯಲು ಹೋರಾಟ ನಡೆಸುತ್ತಿದ್ದಾರೆ.

ವಿಧಾನಸೌಧಗ ನಿವೃತ್ತ ಉದ್ಯೋಗಿ ಡೇವಿಡ್ ನ ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ, ಅವರ ಮಗಳು ಜಾಯ್ಸ್ ತಮಗೆ ಹಂಚಿಕೆ ಮಾಡಿರುವ ನಿವೇಶನದ ಸ್ವಾದೀನ ಪಡೆಯಲು ನಿಯಮಿತವಾಗಿ ಬಿಡಿಎ ಕಚೇರಿಗೆ ಅಲೆಯುತ್ತಿದ್ದಾರೆ. 2012 ರಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ ಜಾಯ್ಸ್ ಈಗ ಒಬ್ಬಂಟಿಯಾಗಿದ್ದಾರೆ.

ಬಿಡಿಎ 2007 ರಲ್ಲಿ ಹಂಚಿಕೆ ಮಾಡಿದ್ದ ನಿವೇಶನದ 20*30 ಸ್ವಾದೀನ ಪತ್ರ ಪಡೆಯಲು ತನ್ನ ತಂದೆ ಜೊತೆ ಓಡಾಡುವ ಉದ್ದೇಶದಿಂದ, ಎಚ್ ಎಸ್ ಬಿಸಿ ಬ್ಯಾಂಕ್ ನ ಕೆಲಸವನ್ನು ಬಿಟ್ಟಿದ್ದಾರೆ. ಬಿಡಿಎ ನಡೆಸುವ ಪ್ರತಿಯೊಂದು ಸಭೆಗಳಲ್ಲಿ ತಪ್ಪದೇ ಭಾಗವಹಿಸುತ್ತಾರೆ. ಗುರುವಾರ ನಡೆದ ಮತ್ತೊಂದು ಪ್ರತಿಭಟನೆಯಲ್ಲಿ ಭಾಗವಹಿಸಲು ಜಾಯ್ಸ್ ಮಹಾಲಕ್ಷ್ಮಿ ಲೇಔಟ್ ನಿಂದ ಆಗಮಿಸಿದ್ದರು.

ಬಿಡಿಎ ಹಂಚಿಕೆ ಮಾಡಿರುವ ನಿವೇಶನ ಪಡೆದಿರುವ ಹಲವು ಮಂದಿ ವಯೋ ವೃದ್ಧರು,  ತಮ್ಮ ನಿವೇಶನದ ಬಗ್ಗೆ ವಿಚಾರಣೆ ಮಾಡಿ ಮಾಹಿತಿ ಸಂಗ್ರಹಿಸಿಕೊಳ್ಳಲು ಪದೇ ಪದೇ ಭೇಟಿ ಮಾಡುವುದು ಇವರಿಗೆ ಕಷ್ಠವಾಗಿದೆ.

ಡೇವಿಡ್ ಅವರಿಗೆ ಹಂಚಿಕೆ ಮಾಡಿದ್ದ ನಿವೇಶನ ಅರ್ಕಾವತಿ ಬಡಾವಣೆಯ 8ನೇ ಬ್ಲಾಕ್ ನಲ್ಲಿತ್ತಿತ್ತು.  ಆದರೆ ನಂಚರ ದಿನಗಳಲ್ಲಿ ಸರ್ಕಾರ ಈ ಜಮೀನನ್ನು ಡಿನೋಟಿಫೈ ಮಾಡಿತ್ತು. ಆದರೆ ತನ್ನ ತಂದೆ ಪ್ರತಿ ವರ್ಷವೂ ಈ ಜಾಗಕ್ಕೆ ಡೇವಿಡ್ ತೆರಿಗೆ ಕಟ್ಟುತ್ತಲೇ ಬಂದಿದ್ದಾರೆ.

ಆದರೆ ಬಿಡಿಎ ಈ ಸಂಬಂಧ ನಿವೇಶನ ಹಕ್ಕುದಾರರಿಗೆ ಇದುವರೆಗೂ ಯಾವುದೇಮಾಹಿತಿ ನೀಡಿರಲಿಲ್ಲಎಂದು ಜಾಯ್ಸ್ ಆರೋಪಿಸಿದ್ದಾರೆ.

SCROLL FOR NEXT