ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಬೆಂಗಳೂರು: ಫೆ.1 ರಿಂದ ವಿಂಗಡಿಸಿದ ಕಸವನ್ನು ಮಾತ್ರ ತೆಗೆದುಕೊಳ್ಳುವಂತೆ ಬಿಬಿಎಂಪಿ ಪೌರ ಕಾರ್ಮಿಕರಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಆಯುಕ್ತರು, ವಿಂಗಡಿಸಿದ ಕಸವನ್ನು ಮಾತ್ರ ತೆಗೆದುಕೊಳ್ಳುವಂತೆ ನಿಯಮ ಜಾರಿಗೊಳಿಸುವುದಕ್ಕೂ ಮುನ್ನ, ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಬಿಬಿಎಂಪಿ ಅಧಿಕಾರಿಗಳು, ಕೌನ್ಸಿಲರ್ ಗಳು ಹಾಗೂ ಸಂಬಂಧಪಟ್ಟವರೊಂದಿಗೆ ಸರಣಿ ಸಭೆ ನಡೆಸಲಾಗಿದೆ. ಈ ನಿಯಮವನ್ನು ಹೆಚ್ಚಿನ ಜನರಿಗೆ ತಿಳಿಸಲು ಮಾಧ್ಯಮಗಳಲ್ಲಿ ಜಾಹಿರಾತು ನೀಡಲಾಗುತ್ತಿದೆ ಎಂದಿದ್ದಾರೆ.
ಬೃಹತ್ ಪ್ರಮಾಣದ ತ್ಯಾಜ್ಯಗಳ ಬಗ್ಗೆ?
ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರು ಪಟ್ಟಿಯಲ್ಲಿ ಗುರುತು ಮಾಡಿರುವ ಮಾರಾಟಗಾರರಿಗೇ ತ್ಯಾಜ್ಯವನ್ನು ನೀಡಬೇಕಾಗುತ್ತದೆ. ಈ ಪೈಕಿ ಕೆಲವರು ತ್ಯಾಜ್ಯವನ್ನು ಬಿಬಿಎಂಪಿ ಕಾಂಪಾಕ್ಟರ್ ಗಳಿಗೆ ನೀಡುತ್ತಿರುವ ಬಗ್ಗೆ ವರದಿಯಾಗಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇನ್ನು ತ್ಯಾಜ್ಯಗಳನ್ನು ಮಿಶ್ರಗೊಬ್ಬರವನ್ನಾಗಿ ಪರಿವರ್ತಿಸುವ ಬಗ್ಗೆ 2,300 ಖಾಯಂ ಪೌರಕಾರ್ಮಿಕರಿಗೆ ತರಬೇತಿ ನೀಡಲಾಗುವುದು.
ವಿಂಗಡನೆಯಾಗದ ತ್ಯಾಜ್ಯವನ್ನು ಸ್ವೀಕರಿಸದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ಮೂಲದಲ್ಲೇ ಜನರು ತ್ಯಾಜ್ಯವನ್ನು ವಿಂಗಡಿಸಬೇಕಾಗುತ್ತದೆ. ಹಸಿ ತ್ಯಾಜ್ಯ, ಒಣ ತ್ಯಾಜ್ಯಗಳನ್ನು ವಿವಿಧ ಸಂಸ್ಥೆಗಳು ಖರೀದಿಸಲಿದ್ದು, ಒಂದೇ ವಾಹನದಲ್ಲಿ ಕೊಂಡೊಯ್ಯಲಾಗುವುದಿಲ್ಲ ಆದ್ದರಿಂದ ಒಟ್ಟಿಗೆ ತೆಗೆದುಕೊಳ್ಳಲಾಗುವುದಿಲ್ಲ.
ಜನರು ಸಹಕರಿಸುತ್ತಿದ್ದಾರೆ. ಕಸ ವಿಂಗಡಿಸಲು ಜನರಿಗೆ ಸಮಸ್ಯೆಯಾಗುತ್ತಿಲ್ಲ
ಅಪರಾಧಿಗಳ ಪತ್ತೆಗೆ ಮಾರ್ಷಲ್ ಗಳ ನೇಮಕ ಯಾವಾಗ?
ಈ ಬಗ್ಗೆ ಸ್ಥಾಯಿ ಸಮಿತಿ( ಆರೋಗ್ಯ) ಯಿಂದ ಅನುಮೋದನೆ ದೊರೆತಿದ್ದು, ಬಿಬಿಎಂಪಿ ಮಾಸಿಕ ಕೌನ್ಸಿಲ್ ನ ಮುಂದಿಡಲಾಗುತ್ತದೆ. ಕೌನ್ಸಿಲ್ ನಲ್ಲಿ ಅನುಮೋದನೆ ದೊರೆತ 2 ತಿಂಗಳ ನಂತರ ಮಾರ್ಷಲ್ ಗಳ ನೇಮಕವಾಗಲಿದೆ.