ವ್ಯಾಗ್ರೇಶ್ವರ ದೇವಾಲಯ 
ರಾಜ್ಯ

ಕರ್ನಾಟಕದ ಈ ಗ್ರಾಮದ ಜನತೆಗೆ ಹುಲಿಯೇ ಆರಾಧ್ಯ ದೈವ!

ನಗರದ ಸದ್ದುಗದ್ದಲಗಳಿಂದ ದೂರಾಗಿ ಪ್ರಾಣಿಪಕ್ಷಿಗಳ ಜೊತೆ ನೆಮ್ಮದಿಯಾಗಿ ಜೀವಿಸುತ್ತಿರುವ ಪಶ್ಚಿಮ ಘಾಟ್ ಅರಣ್ಯದ ಲೊಂಡಾ ಎಂಬ ಗ್ರಾಮದ ...

ಲೊಂಡಾ, ಬೆಳಗಾವಿ: ನಗರದ ಸದ್ದುಗದ್ದಲಗಳಿಂದ ದೂರಾಗಿ ಪ್ರಾಣಿಪಕ್ಷಿಗಳ ಜೊತೆ ನೆಮ್ಮದಿಯಾಗಿ ಜೀವಿಸುತ್ತಿರುವ ಪಶ್ಚಿಮ ಘಾಟ್ ಅರಣ್ಯದ ಲೊಂಡಾ ಎಂಬ ಗ್ರಾಮದ ಜನತೆ ಹುಲಿಯನ್ನು ತಮ್ಮ ಆರಾಧ್ಯದೈವ ಎಂದು ಪೂಜಿಸುತ್ತಿದ್ದಾರೆ.

ಬೆಳಗಾವಿಯ ಲೊಂಡಾ ಗ್ರಾಮದಲ್ಲಿರುವ ವ್ಯಾಗ್ರೇಶ್ವರ ಅಥವಾ ವ್ಯಾಗೋಬಾ ದೇವಾಲಯದಲ್ಲಿರುವ ಹುಲಿ ಮೂರ್ತಿಯನ್ನು ಇಲ್ಲಿನ ಜನ ದೇವರಂತೆ ಪೂಜಿಸುತ್ತಾರೆ.

ಸಾಮಾನ್ಯವಾಗಿ ಹುಲಿಯನ್ನು ದೇವತೆಗಳ ವಾಹನ ಎಂದು ಕರೆಯಲಾಗುತ್ತದೆ. ಆದರೆ ಲೊಂಡಾದಲ್ಲಿ ಹುಲಿಯೇ ಇವರ ದೇವರು, ಲೊಂಡಾದ ಕುಣಬಿ ಸಮುದಾಯದವರು ಹಲವು ದಶಕಗಳಿಂದ ಹುಲಿಯನ್ನು ದೇವರೆಂದು ಪೂಜಿಸುತ್ತಿದ್ದಾರೆ.

ಗೋವಾ ಮತ್ತು ಕರ್ನಾಟಕಕ್ಕೆ ಸಂಪರ್ಕ ಬೆಳೆಸಲು ಶತಮಾನದ ಹಿಂದೆ ಬ್ರಿಟಿಷರು ಈ ಅರಣ್ಯ ಪ್ರದೇಶದಲ್ಲಿ ರೈಲ್ವೆ ಹಳಿ ನಿರ್ಮಿಸುತ್ತಿದ್ದ ವೇಳೆ ಹುಲಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿತ್ತು. ಗ್ರಾಮದ ದನ ಹಾಗೂ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುವ ಭಯದಿಂದಾಗಿ ಹುಲಿಗಾಗಿ ಒಂದು ದೇವಾಲಯ ನಿರ್ಮಾಣ ಮಾಡಲಾಯಿತು.

ದೇವಾಲಯ ನಿರ್ಮಾಣ ಮಾಡಿದ ಮೇಲೆ ಹುಲಿ ದಾಳಿ ಕಡಿಮೆಯಾಯಿತು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಜೊತೆಗೆ ಕೆಟ್ಟ ಶಕ್ತಿಗಳ ಹಾವಳಿಯಿಂದ ಗ್ರಾಮವನ್ನು ವ್ಯಾಗ್ರೇಶ್ವರ ಕಾಪಾಡುತ್ತಾನೆ ಎಂದು ನಂಬಿದ್ದಾರೆ.

ದೇವಾಲಯ ನಿರ್ಮಾಣನವಾಗಿರುವ ಈ ವನ್ಯಜೀವಿಗಳ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಸಾಕಷ್ಟಿದೆ. ವ್ಯಾಗ್ರೇಶ್ವರ ದೇವಾಲಯಲ್ಲಿ ಗ್ರಾಮಸ್ಥರು ಆಗಾಗ ಪೂಜೆ ಪುನಸ್ಕಾರ ನೆರವೇರಿಸುತ್ತಾರೆ. ಇನ್ನು ಇದೇ ಮಾದರಿಯ ಹುಲಿಯ ದೇವಾಲಯ ಪುಣೆಯಲ್ಲಿದೆ. 1950 ರ ದಶಕದಲ್ಲಿ ನಿರ್ಮಿಸಿರುವ ಇದನ್ನು ವ್ಯಾಗೋಬ ಮಂದಿರ್ ಎಂದು ಕರೆಯಲಾಗುತ್ತದೆ.

ಮೂರು ವರ್ಷಗಳಿಗೊಮ್ಮೆ ದೇವಾಲಯ ಆಡಳಿತ ಮಂಡಳಿ ಇಲ್ಲಿ ಉತ್ಸವ ಆಯೋಜಿಸುತ್ತದೆ. ಇಲ್ಲಿಗೆ ಮಹಾರಾಷ್ಟ್ರ ಗೋವಾ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT