ರಾಜ್ಯ

ಮಹಿಳೆಯ ಗರ್ಭಕೋಶ ತೆಗೆದ ರಾಣೆ ಬೆನ್ನೂರು ವೈದ್ಯನಿಗೆ ಶಿಕ್ಷೆಯಾಗಲಿ: ಶೆಟ್ಟರ್

Shilpa D

ಬೆಂಗಳೂರು: ಹೊಟ್ಟೆ ನೋವು ಎಂದು ಬಂದ ಮಹಿಳೆಯ ಗರ್ಭಕೋಶ ತೆಗೆದ ರಾಣೆ ಬೆನ್ನೂರು ವೈದ್ಯನಿಗೆ ಶಿಕ್ಷೆಯಾಗಬೇಕು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.

ರಾಣೆ ಬೆನ್ನೂರಿನ ವೈದ್ಯ ಮಹಿಳೆಯ ಗರ್ಭಕೋಶ ತೆಗೆದು ಹಾಕಿದ ಪ್ರಕರಣವನ್ನು ವಿಧಾನಸಭೆಯಲ್ಲಿ ಜಗದೀಶ್ ಶೆಟ್ಟರ್ ಪ್ರಸ್ತಾಪಿಸುತ್ತಿದ್ದಂತೆ ಸದನದ ಆಘಾತ ವ್ಯಕ್ತ ಪಡಿಸಿತು. ರಾಣೆ ಬೆನ್ನೂರಿನ ಸರ್ಕಾರಿ ಆಸ್ಪತ್ರೆ ವೈದ್ಯನಿಗೆ ತಕ್ಕ ಶಿಕ್ಷೆ ನೀಡಲು ಆರೋಗ್ಯ ಸಚಿವರು ಗಮನ ಹರಿಸಬೇಕು ಎಂದು ಶೆಟ್ಟರ್ ಆಗ್ರಹಿಸಿದರು.

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಹೊಟ್ಟೆ ನೋವು ಎಂದು ಬಂದಾಗ ಆಕೆಯ ಗರ್ಭಕೋಶವನ್ನು ತೆಗೆದಿರುವ ವೈದ್ಯ ಡಾ. ಶಾಂತಾ ನೂರಾರು ಹೆಣ್ಣು ಮಕ್ಕಳ ಗರ್ಭಕೋಶಕ್ಕೆ ಕತ್ತರಿಹಾಕಿದ್ದಾರೆ ಎಂದು ಆರೋಪಿಸಿದರು. ಡಾ. ಶಾಂತಾ ಅವರನ್ನು ಅಮಾನತು ಮಾಡಲಾಗಿತ್ತು,  ಆದರೆ ಕೆಲವೇ ದಿನಗಳಲ್ಲಿ ಕರ್ನಾಟಕ ಆಡಳಿತಾತ್ಮಕ ಮಂಡಳಿ ಮೂಲಕ ಅಮಾನತನ್ನು ರದ್ದು ಪಡಿಸಿಕೊಂಡಿದ್ದಾರೆ ಎಂದು ಶೆಟ್ಟರ್ ವಿವರಿಸಿದರು. ಡಾ. ಶಾಂತಾ ಅವರಿಗೆ ರಾಜಕಾರಣಿಗಳ ಸಂಪರ್ಕವಿದೆ ಎಂದು ಆರೋಪಿಸಿರುವ ಶೆಟ್ಟರ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಬೇಕೆಂದು ಒತ್ತಾಯಿಸಿದ್ದಾರೆ.

SCROLL FOR NEXT