ಸಿಎಂ ಸಿದ್ದರಾಮಯ್ಯ 
ರಾಜ್ಯ

ರಾಜ್ಯದಲ್ಲಿ ಆರು ಹೊಸ ಉದ್ದಿಮೆ ಸ್ಥಾಪನೆಗೆ 9ಸಾವಿರ ಕೋಟಿ ಬಂಡವಾಳ ಹೂಡಿಕೆ

ರಾಜ್ಯದಲ್ಲಿ ಆರು ಹೊಸ ಉದ್ದಿಮೆ ಸ್ಥಾಪಿಸಲು 9 ಸಾವಿರ ಕೋಟಿ ರು ಬಂಡವಾಳ ಹೂಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ...

ಬೆಂಗಳೂರು: ರಾಜ್ಯದಲ್ಲಿ  ಆರು ಹೊಸ ಉದ್ದಿಮೆ ಸ್ಥಾಪಿಸಲು 9 ಸಾವಿರ ಕೋಟಿ ರು  ಬಂಡವಾಳ ಹೂಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿದೆ. ಈ ಆರು ಹೊಸ ಉದ್ದಿಮೆಗಳಿಂದ 35, 487 ಮಂದಿಗೆ ಉದ್ಯೋಗವಕಾಶ ದೊರೆಯಲಿದೆ.

ಮೆ. ಒರಾಕಲ್‌ ಇಂಡಿಯಾ ಪ್ರೈ.ಲಿ. ಬೆಂಗಳೂರು ನಗರ ಜಿಲ್ಲೆಯ ಕಾಡುಬೀಸನಹಳ್ಳಿಯಲ್ಲಿ 2438 ಕೋಟಿ ರೂ. ಹೂಡಿಕೆ ಮಾಡಲಿದ್ದು, 9697 ಮಂದಿಗೆ ಉದ್ಯೋಗ ಕಲ್ಪಿಸಲಿದೆ. ಇದಕ್ಕಾಗಿ 13.29 ಎಕರೆ ಭೂಮಿ ಮಂಜೂರು ಮಾಡಲಾಗಿದೆ.

ಮೆ.ಬ್ಲೂಸ್ಟೋನ್‌ ಟೆಕ್‌ಪಾರ್ಕ್‌ ಎಲ್‌ಎಲ್‌ಸಿ ಕಂಪನಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅಪ್ಪಾಜಿಪುರ, ಸಮೇತನಹಳ್ಳಿ ಮತ್ತು ಕೊರಲೂರು ಗ್ರಾಮದಲ್ಲಿ ಇಂಟಿಗ್ರೇಟ್‌ ಐಟಿ ಪಾರ್ಕ್‌ ಸ್ಥಾಪನೆಗೆ 55 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಕಂಪನಿಯು ಅಲ್ಲಿ 2051.39 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ.

ಮೆ.ಎಲ್‌ ಅಂಡ್‌ ಟಿ ಕನ್‌ಸ್ಟ್ರಕ್ಷನ್‌ ಎಕ್ಯೂಪ್‌ಮೆಂಟ್‌ ಲಿಮಿಟೆಡ್‌ 1280 ಕೋಟಿ ರೂ. ಮತ್ತು 800 ಕೋಟಿ ರೂ. ವೆಚ್ಚದಲ್ಲಿ 18000 ಉದ್ಯೋಗಾವಕಾಶ ಕಲ್ಪಿಸುವ ಎರಡು ಐಟಿ, ಐಟಿಇಎಸ್‌ ಎಸ್‌ಇಝೆಡ್‌ ಸ್ಥಾಪನೆಗೆ ಮುಂದಾಗಿದ್ದು, ಅದಕ್ಕಾಗಿ ಬೆಂಗಳೂರು ನಗರದ ಬ್ಯಾಟರಾಯನಪುರದಲ್ಲಿ 12.22 ಎಕರೆ ಹಾಗೂ 5.8 ಎಕರೆ ಭೂಮಿ ಮಂಜೂರು ಮಾಡಲಾಗಿದೆ.

ಮುದ್ದೇನಹಳ್ಳಿಯಲ್ಲಿ ಪ್ರವಾಸೋದ್ಯಮ ಮತ್ತು ಕ್ರೀಡಾಹಬ್‌: ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಮುದ್ದೇನಹಳ್ಳಿಯಲ್ಲಿ ಮೆ.ಕಾರ್ನರ್‌ ಸ್ಟೋನ್‌ ಪ್ರಾಪರ್ಟಿ ಡೆವಲಪರ್ಸ್‌ ಸಂಸ್ಥೆ 1330 ಕೋಟಿ ರೂ. ವೆಚ್ಚದಲ್ಲಿ 5540 ಮಂದಿಗೆ ಉದ್ಯೋಗ ಕಲ್ಪಿಸುವ ಸಮಗ್ರ ಮನರಂಜನಾ ಪಾರ್ಕ್‌, ಪ್ರವಾಸೋದ್ಯಮ ಮತ್ತು ಕ್ರೀಡಾ ಹಬ್‌ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದ್ದು, ಅದಕ್ಕಾಗಿ 300 ಎಕರೆ ಜಮೀನು ಮಂಜೂರು ಮಾಡಲಾಗಿದೆ.

ಅದೇರೀತಿ ಮೆ.ದೇವಿ ಸಿಟಿ ಇಂಡಸ್ಟ್ರಿಯಲ್‌ ಪಾರ್ಕ್‌ ಸಂಸ್ಥೆಯು 1149 ಕೋಟಿ ರೂ. ವೆಚ್ಚದಲ್ಲಿ ಒಂದು ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಹೈಟೆಕ್‌ ಇಂಡಸ್ಟ್ರಿಯಲ್‌ ಪಾರ್ಕ್‌ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ಉನ್ನತ ಮಟ್ಟದ ಸಮಿತಿ, ಅದಕ್ಕಾಗಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಯಮಕನಮರಡಿ ಹೋಬಳಿಯ ವಂಟ್‌ಮುರಿ ಗ್ರಾಮದಲ್ಲಿ 1054 ಎಕರೆ ಭೂಮಿ ಒದಗಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT