ರಾಜ್ಯ

ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ 3ನೇ ಮಹಡಿಯಿಂದ ಬಿದ್ದ ರೇಪ್ ಆರೋಪಿ

Shilpa D
ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸಿಟಿ ಸಿವಿಲ್‌ ಕೋರ್ಟ್ ಕಟ್ಟಡದ 4ನೇ ಮಹಡಿಯಿಂದ ಬಿದ್ದು ಅತ್ಯಾಚಾರ ಆರೋಪಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಬಾಗಲಗುಂಟೆ ಠಾಣೆ ವ್ಯಾಪ್ತಿಯ ಹದಿನೈದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ವಿಕ್ಕಿ ಅಲಿಯಾಸ್‌ ನರಸಿಂಹಮೂರ್ತಿ (21) ಎಂಬಾತನನ್ನು ಬಂಧಿಸಿದ್ದ ಪೊಲೀಸರು, 55ನೇ ಸಿಟಿ ಸಿವಿಲ್‌ ನ್ಯಾಯಾಲಯಕ್ಕೆ ಮಧ್ಯಾಹ್ನ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆತನನ್ನು 12 ದಿನಗಳವರೆಗೆ ನ್ಯಾಯಾಂಗ  ಬಂಧನಕ್ಕೆ ಒಪ್ಪಿಸಿದರು.
ವಿಕ್ಕಿಯನ್ನು ಕರೆದುಕೊಂಡು ನ್ಯಾಯಾಲಯ ಕಟ್ಟಡದ ಸ್ಟೇರ್ ಕೇಸ್ ಬಳಿ ಕುಳಿತಿದ್ದ. ಈ ವೇಳೆ ತನಗೆ ತಲೆ ಸುತ್ತುತ್ತಿದೆ ಎಂದು ಆರೋಪಿ ಹೇಳಿದ್ದಾನೆ. ಸಹಾಯ ಪಡೆಯಲು ಪಕ್ಕದಲ್ಲಿದ್ದ ಪೊಲೀಸ್ ಆ ಕಡೆ ತಿರುಗಿದಾಗ ವಿಕ್ಕಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ 3 ನೇ ಮಹಡಿಯಿಂದ ಬಿದ್ದಿದ್ದಾನೆ.  ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 
ಬಾಗಲಗುಂಟೆ ಪೊಲೀಸರು ಆರೋಪಿಯನ್ನು  ನ್ಯಾಯಾಲಯದ ನಿರ್ದೇಶನದಂತೆ ಜೈಲಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಹೀಗಾಗಿ ಆತನ ವಿರುದ್ಧ ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನ (ಐಪಿಸಿ 224)’ ಆರೋಪದಡಿ ಹಲಸೂರು ಗೇಟ್‌ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ್ದಾರೆ. 
ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ವಿಕ್ಕಿಯು ಮೊದಲ ಆರೋಪಿ. ಬಾಲಕಿಯನ್ನು ಅಪಹರಿಸಿ ಆಂಧ್ರಪ್ರದೇಶದ ಮಡಕಶಿರ ತಾಲ್ಲೂಕಿನ ಮನೆಯೊಂದರಲ್ಲಿ ಕೂಡಿಟ್ಟು ಅತ್ಯಾಚಾರ ಎಸಗಿದ್ದ’ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದರು.
SCROLL FOR NEXT