ರಾಜ್ಯ

ಬೆಂಗಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ: ರಸ್ತೆಯಲ್ಲಿ ಗಗನಸಖಿಗೆ ಲೈಂಗಿಕ ದೌರ್ಜನ್ಯ

Shilpa D

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಬಾಣಸವಾಡಿಯ ಎಚ್​ಆರ್​ಬಿಆರ್ ಲೇಔಟ್​ನಲ್ಲಿ ಗಗನಸಖಿಯೊಬ್ಬರಿಗೆ ಬೈಕ್ ಸವಾರ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.

ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಹೋಟೆಲ್​ನಲ್ಲಿ ಊಟ ಮುಗಿಸಿ ತನ್ನ ಫ್ರೆಂಡ್ ಜೊತೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ   ಬೈಕ್ ಸವಾರನೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಮುಖಕ್ಕೆ ಹೆಲ್ಮೆಟ್ ಹಾಕಿದ್ದ ಬೈಕ್ ಸವಾರ ಯುವತಿಯ ಬಟ್ಟೆ ಹರಿದಿದ್ದಾನೆ. ಯುವತಿ ಕೂಗಿಕೊಂಡಾಗ ಭಯಗೊಂಡ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಗಗನ ಸಖಿ ಎಚ್ ಆರ್ ಬಿಆರ್ ಲೇಔಟ್ ನಿವಾಸಿಯಾಗಿದ್ದಾರೆ.

ಫೆಬ್ರವರಿ 12 ರಂದು ಈ ಘಟನೆ ನಡೆದಿದ್ದು, ಎರಡು ದಿನಗಳ ನಂತರ ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

SCROLL FOR NEXT