ಬಳ್ಳಾರಿ: ಕೊತ್ತೂರಿನಲ್ಲಿ ಗುರು ಕೊಟ್ಟೂರೇಶ್ವರ ಜಾತ್ರೆ ಸಂದರ್ಭದಲ್ಲಿ ರಥ ಉರುಳಿಬಿದ್ದು 11 ಜನರಿಗೆ ಗಾಯವಾದ ಘಟನೆಗೆ ಸಂಬಂಧಪಟ್ಟಂತೆ ಲೋಕೋಪಯೋ ಗಿ ಇಲಾಖೆ ಸಹಾಯಕ ಕಾರ್ಯಕಾರಿ ಎಂಜಿನಿಯರ್ ತಿಮ್ಮಪ್ಪ,ದತ್ತಿ ಇಲಾಖೆ ಸಹಾಯಕ ಆಯುಕ್ತ ಮಹೇಶ್, ದೇವಸ್ತಾನ ಸಮಿತಿಯ ಕಾರ್ಯಕಾರಿ ಅಧಿಕಾರಿ ಹಾಲಪ್ಪ ಅವರ ವಿರುದ್ಧ ನಿರ್ಲಕ್ಷ್ಯದ ಕೇಸು ದಾಖಲಾಗಿದೆ.
65 ಅಡಿ ಎತ್ತರದ ಮರದ ದೇವಸ್ಥಾನದ ರಥವನ್ನು ವಾರ್ಷಿಕ ಜಾತ್ರೆ ಪ್ರಯುಕ್ತ ಹೊರತೆಗೆಯಲಾಗಿತ್ತು. ಚೆಲ್ಲ ಆಂಜನಪ್ಪ ಎಂಬುವವರು ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಥದ ಮುಂಬಾಗದ ಬಲಚಕ್ರ ಉರುಳಿ ಬಿದ್ದು ಅಲ್ಲಿ ಸೇರಿದ್ದ ಭಕ್ತರು ಗಾಯಗೊಂಡಿದ್ದಾರೆ.
ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ಘಟನೆಯ ತನಿಖೆ ನಡೆಸಲಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.