ಕೆ,ಸುರೇಶ್ ಮತ್ತು ಸತೀಶ್ ಹನುಮಂತಪ್ಪ 
ರಾಜ್ಯ

ರಾಜ್ಯದ ಇಬ್ಬರು ಕಲಾವಿದರಿಗೆ ಲಲಿತಾ ಕಲಾ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ

ಲಲಿತಾ ಕಲಾ ಅಕಾಡೆಮಿ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ರಾಜ್ಯದ ಇಬ್ಬರು ಕಲಾವಿದರು ಭಾಜನರಾಗಿದ್ದಾರೆ. 111 ಮಂದಿ ಪ್ರದರ್ಶಕರಲ್ಲಿ 16 ಮಂದಿಗೆ ರಾಷ್ಟ್ರೀಯ ಪ್ರಶಸ್ತಿ ...

ಬೆಂಗಳೂರು: ಲಲಿತಾ ಕಲಾ ಅಕಾಡೆಮಿ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ರಾಜ್ಯದ ಇಬ್ಬರು ಕಲಾವಿದರು ಭಾಜನರಾಗಿದ್ದಾರೆ.111 ಮಂದಿ ಪ್ರದರ್ಶಕರಲ್ಲಿ 16 ಮಂದಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮೈಸೂರಿನ ಕೆ. ಸುರೇಶ್, ಹಾಗೂ ಹಾವೇರಿಯ ಸತೀಶ್ ಹನುಮಂತಪ್ಪ ರಾಜ್ಯದ ಇಬ್ಬರು ಕಲಾವಿದರಾಗಿದ್ದಾರೆ, ಉಳಿದಂತೆ ಲಕ್ಷ್ಣಣನ್ ಪ್ರಸಾದ್, ಗುಕನ್ ರಾಜ್ ಕೋಥಂಡರಾಮನ್, ಸಾಜೇಶ್ ಪಾ,  ಹರೀಶ್ ಕುಮಾರ್ ಓಜಾ, ಐಶ್ವರ್ಯ ಪರಮಿತಾ ಕೊನ್ವಾರ್, ಮದನ್ ಲಾಲ್, ಸರವಣ ದೇವಸೇಗಾಮಣಿ, ನಿಲ್ಮೋಣಿ ರಾಹಾ, ವಿಜಯ್ ಭಾಗತ್, ಕವಿತಾ ಮೆಹ್ರೋತಾ, ಅನನ್ಯ ದಲಾಲ್, ಅಖಿಲ್ ಮೋಹನ್, ಮತ್ತು ಅನಿಲ್ ಕುಮಾರ್ ಬೋಡ್ ವಾಲ್ ಲಲಿತಾ ಕಲಾ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಲಾವಿದರಾಗಿದ್ದಾರೆ.

ಶುಕ್ರವಾರ ರಾಜ್ಯಪಾಲ ವಜುಬಾಯಿ ರೂಡವಾಲಾ ಈ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.  ಪ್ರಶಸ್ತಿ ಫಲಕ ಹಾಗೂ 1 ಲಕ್ಷ ರು ನಗದು, ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಲಲಿತಾ ಕಲಾ ಅಕಾಡೆಮಿ ಆಯೋಜಿಸಿದ್ದ 58ನೇ ರಾಷ್ಟ್ರಮಟ್ಟದ ಪ್ರದರ್ಶನದಲ್ಲಿ 111 ಕಲಾವಿದರು ಸುಮಾರು 6ಸಾವಿರ ಕಲಾಕೃತಿಗಳನ್ನು  ಪ್ರದರ್ಶಿಸಿದ್ದರು, ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ ನೀಡಲು ಅಕಾಡೆಮಿಯ ಮಾನದಂಡದಂತೆ ಕಲಾವಿದರನ್ನು ಆಯ್ಕೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?