ಎಚ್.ಡಿ ದೇವೇಗೌಡ 
ರಾಜ್ಯ

ನೋಟು ರದ್ಧತಿ ಸದುದ್ದೇಶದಿಂದ ಕೂಡಿದೆ: ನಂತರದ ಮೋದಿ ನಡೆ ನಿರಾಸೆ ತಂದಿದೆ: ದೇವೇಗೌಡ

ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನೋಟು ನಿಷೇಧ ಕ್ರಮ ಸದುದ್ದೇಶದಿಂದ ಕೂಡಿದೆ, ಆದರೆ ಅದರಿಂದ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು...

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನೋಟು ನಿಷೇಧ ಕ್ರಮ ಸದುದ್ದೇಶದಿಂದ ಕೂಡಿದೆ, ಆದರೆ ಅದರಿಂದ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ ಇದು ದೇಶದ ಜನತೆಗೆ ತೀವ್ರ  ನಿರಾಸೆ ಉಂಟು ಮಾಡಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಸರ್ವೋಚ್ಚನಾಯಕ ಎಚ್ ಡಿ ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೋಟು ರದ್ದತಿಯ ನಂತರದ 50 ದಿನಗಳಲ್ಲಿ 60 ನಿರ್ಧಾರಗಳನ್ನು ಮಾಡಲಾಗಿದೆ. ಇದರಿಂದ ಬಡವರು, ರೈತರು, ಕೂಲಿ– ಕಾರ್ಮಿಕರು ಪರದಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರೈತರ 60 ದಿನಗಳ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಪ್ರಧಾನಿ ಪ್ರಕಟಿಸಿದ್ದಾರೆ. ದೇಶದಲ್ಲಿ ಭೀಕರ ಬರಗಾಲ ಇದೆ. ಕೆಲವು ರಾಜ್ಯಗಳಲ್ಲಿ ಪ್ರವಾಹದಿಂದಾಗಿ  ಅತಿವೃಷ್ಟಿಯೂ ಉಂಟಾಗಿದೆ. ಬಡ್ಡಿ ಮನ್ನಾದಿಂದ ರೈತರ ಸಂಕಷ್ಟ ಪರಿಹಾರ ಆಗುವುದಿಲ್ಲ. ಡಿಸೆಂಬರ್ 31 ರಂದು ದೇಶವನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು, ಆದರೆ ಅವರ ಮಾತುಗಳ ನನಗೆ ಅರ್ಥವಾಗಲಿಲ್ಲ, ದೇಶದ ಜನತೆಗೆ ಅವರು ಏನು ಸಂದೇಶ ನೀಡಿದರು ಎಂಬುದು ನನಗೆ ತಿಳಿಯಲಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಕುವೈತ್‌ ಪ್ರಮುಖ ತೈಲ ಶುದ್ಧೀಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ, ಭಾರೀ ಬೆಂಕಿ

ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಬೇಡ: ಟ್ರಂಪ್ ಸೂಚನೆ ಬೆನ್ನಲ್ಲೇ ಹಿಂದೆ ಸರಿದ ಇಸ್ರೇಲ್, ಇರಾನ್ 'ನಾಶವಾಗಿದೆ' ಎಂದ ನೆತನ್ಯಾಹು

Video: ನಮ್ಮ ಮೆಟ್ರೋದಲ್ಲಿ ಹಾಡು ಹಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ 11 ಯುವತಿಯರ ಬಂಧನ

Iran-Israel War: ಗಲ್ಫ್ ವಾಯುಪ್ರದೇಶ ಸಂಚಾರ ತಪ್ಪಿಸಿ; ವಿಮಾನಯಾನ ಸಂಸ್ಥೆಗಳಿಗೆ DGCA ಎಚ್ಚರಿಕೆ

ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದೀರಿ, ಮತ್ತೆ ದಾಳಿಯಾದರೆ ಒತ್ತಡಕ್ಕೆ ಮಣಿಯದೆ ಅನಿಯಂತ್ರಿತ ದಾಳಿ: ಇರಾನ್ ಕಠಿಣ ಎಚ್ಚರಿಕೆ

SCROLL FOR NEXT