ರಾಜ್ಯ

ಕೇಂದ್ರ ಸರ್ಕಾರಕ್ಕೆ ನಮ್ಮ ಹಣ ಏಕೆ ಬೇಕು? ಅನಿವಾಸಿ ಭಾರತೀಯರ ಪ್ರಶ್ನೆ

Shilpa D

ಬೆಂಗಳೂರು: ಕೇಂದ್ರ ಸರ್ಕಾರದ ಬಳಿ ಅಗತ್ಯವಾದ ಹಣವಿದೆ, ಹೀಗಿದ್ದರೂ ನಮಾಮಿ ಗಂಗಾ ಮತ್ತು ಸ್ವಚ್ಛಭಾರತ್ ಮಿಷನ್ ಗಳಿಗೆ ಅನಿವಾಸಿ ಭಾರತೀಯರ ಹಣವನ್ನು ಸರ್ಕಾರ ಏಕೆ ಕೇಳುತ್ತಿದೆ ಎಂದು ಬೆಂಗಳೂರು ಮೂಲದ ಎನ್ ಆರ್ ಐ ಪ್ರಶ್ನಿಸಿದ್ದಾರೆ.

ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ಡೆವಲಪ್‌ಮೆಂಟ್ ಫೌಂಡೇಷನ್  ಆಫ್ ಓವರ್‌ಸೀಸ್ ಇಂಡಿಯನ್ಸ್ ಕುರಿತ ಸಂವಾದ ಗೋಷ್ಠಿಯಲ್ಲಿ. ಬೆಂಗಳೂರು ಮೂಲದ ವಿಘ್ನೇಶ್ವರ್ ಶಿಶಿರ್  ಈ ಪ್ರಶ್ನೆ ಕೇಳಿದರು.

ಗೋಷ್ಠಿಯ ಆರಂಭದಲ್ಲಿ ವಿದೇ­ಶಾಂಗ ವ್ಯವಹಾರ ಸಚಿವಾಲಯದ ಜಂಟಿ ನಿರ್ದೇಶಕಿ ವಾಣಿ ರಾವ್ ಅವರು ಐಡಿಎಫ್‌ಒಐನ ಕಾರ್ಯ ಚಟುವಟಿ­ಕೆಗಳ ಬಗ್ಗೆ ವಿವರಣೆ ನೀಡಿದರು.ದೇಶದ ಸಾಮಾಜಿಕ ಕೆಲಸಗಳಲ್ಲಿ ಅನಿವಾಸಿ ಭಾರತೀಯರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.ಅನಿವಾಸಿ ಭಾರತೀಯರು ನೀಡುವ ದೇಣಿಗೆಯಿಂದ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಕ್ಕೆ ಸಹಾಯ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಈ ವೇಳೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಧ್ಯಾನೇಶ್ವರ ಎಂ ಮುಲೆ ನೀವು ನಿಮ್ಮ ತಾಯ್ನಾಡಿನ ಅಭಿವೃದ್ಧಿಗೆ ಹಣ ನೀಡುವುದಕ್ಕೆ ಪಾರದರ್ಶಕವಾದ ವೇದಿಕೆ ಸಿದ್ಧಪಡಿಸಿದ್ದೇವಷ್ಟೇ. ಯಾರಿಗೂ ಒತ್ತಾಯ ಮಾಡಿಲ್ಲ. ದೇಣಿಗೆ ನೀಡುವ ಹಣಕ್ಕೆ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ ಎಂದು ಸಮರ್ಥಿಸಿಕೊಂಡರು.

SCROLL FOR NEXT