ರಾಜ್ಯ

ರಾಜಕಾರಣಿಗಳು, ಅಧಿಕಾರಿಗಳು ವಿವಿ ಆಡಳಿತದಲ್ಲಿ ತಲೆ ಹಾಕಬಾರದು: ಕೆ.ಎಸ್ ರಂಗಪ್ಪ

Shilpa D

ಮೈಸೂರು: ರಾಜಕಾರಣಿಗಳು ಮತ್ತು ಅಧಿಕಾರಿಗಳು ರಾಜ್ಯದತ ವಿಶ್ವ ವಿದ್ಯಾನಿಲಯಗಳ ಆಡಳಿತ ವಿಚಾರದಲ್ಲಿ ಮೂಗು ತೂರಿಸಬಾರದು ಎಂದು ಮೈಸೂರು ವಿವಿ ಕುಲಪತಿ ಹುದ್ದೆಯಿಂದ ನಿವೃತ್ತಿ ಹೊಂದಿದ ಕೆ.ಎಸ್ ರಂಗಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ಮೈಸೂರು ವಿವಿ ಕುಲಪತಿ ಹುದ್ದೆಯಿಂದ ಕೆಳಗಿಳಿಯುತ್ತಿರುವ ರಂಗಪ್ಪ, ರಾಜ್ಯದಲ್ಲಿರುವ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೂ ಸ್ವಾಯತ್ತತೆ ಬೇಕು, ಐಐಎಂ ಮತ್ತು ಐಐಟಿ ಗಳಂತೆ ಕೆಲಸ ನಿರ್ವಹಿಸಲು ವಿವಿಗಳಿಗೆ ಮುಕ್ತ ಅವಕಾಶ ನೀಡಬೇಕು  ಎಂದರು.

ಚೀನಾ ಮೂಲದ ಸಿನೋಫಾರ್ಮ್ ಝಿಜುನ್ ಫಾರ್ಮಾಸ್ಯೂಟಿಕಲ್ ಕೋ. ಲಿಮಿಟೆಡ್ ಕಂಪನಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ನೇಮಕವಾಗಿರು ರಂಗಪ್ಪ ಅವರು, ಇಸ್ರೆಲ್ ವಿವಿಗೆ ವಿಸಿಟಿಂಗ್ ಪ್ರೊಪೆಸರ್ ಆಗಿ ಕೂಡ ನೇಮಕಗೊಂಡಿದ್ದಾರೆ.

ಮೇ 20 ರವರೆಗೂ ಮೈಸೂರು ವಿವಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬೇಕಿತ್ತು, ಆದರೆ ರಂಗಪ್ಪ ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದಾರೆ.

SCROLL FOR NEXT