ಸಂಗ್ರಹ ಚಿತ್ರ 
ರಾಜ್ಯ

ಕಾವೇರಿಯಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳ ಸಾವು!

ಪ್ರವಾಸಕ್ಕೆಂದು ತೆರಳಿದ್ದ ವಿದ್ಯಾರ್ಥಿಗಳು ಕಾವೇರಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು: ಪ್ರವಾಸಕ್ಕೆಂದು ತೆರಳಿದ್ದ ವಿದ್ಯಾರ್ಥಿಗಳು ಕಾವೇರಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಬೆಂಗಳೂರು ಮೂಲದ ಸುಮಾರು 54 ವಿದ್ಯಾರ್ಥಿಗಳ ತಂಡವೊಂದು ಶಿವನಸಮುದ್ರ ಗಗನ ಚುಕ್ಕಿ, ಭರಚುಕ್ಕಿ ಜಲಪಾತಕ್ಕೆ ಪ್ರವಾಸಕ್ಕೆಂದು ಆಗಮಸಿದ್ದವು. ಈ ವೇಳೆ ಈಜಲೆಂದು ನೀರಿಗೆ ಬಿದ್ದ ಇಬ್ಬರು ವಿದ್ಯಾರ್ಥಿಗಳು  ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಗಳನ್ನು 20 ವರ್ಷದ ಶ್ರೀನಿವಾಸ್, 21 ವರ್ಷದ ದೇವರಾಜು ಎಂದು ಗುರುತಿಸಲಾಗಿದೆ. ನೀರಿನಲ್ಲಿ ಅಪಾಯಕ್ಕೆ ಸಿಲುಕಿದ್ದ ಮೂರನೇ ವಿದ್ಯಾರ್ಥಿ ಮಹಾದೇವ್ ಎಂಬಾತನನ್ನು ರಕ್ಷಿಸಲಾಗಿದ್ದು,  ಆತನನ್ನು ಕೆಆರ್ ಪೇಟೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಂಗಳೂರಿನ ಬಿಷಪ್ ಕಾಟನ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಶುಕ್ರವಾರ ಪ್ರವಾಸಕ್ಕೆಂದು ಶಿವನಸಮುದ್ರ ಗಗನ ಚುಕ್ಕಿ, ಭರಚುಕ್ಕಿ ತೆರಳಿತ್ತು. ಜಲ ಕ್ರೀಡೆ ಬಳಿಕ ವೆಸೆಲ್ಲೇ ಸೇತುವೆ ಬಳಿ ವಿದ್ಯಾರ್ಥಿಗಳು ಊಟ ಮಾಡಿದ್ದು, ಬಳಿಕ  ನದಿಯಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ದುರಂತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ ಶ್ರೀನಿವಾಸ್ ಹಾಗೂ ದೇವರಾಜ್ ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ಸ್ನೇಹಿತರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಿಮಗೆ ಬುದ್ಧಿವಂತಿಕೆಯ ಕೊರತೆಯಿದ್ದರೆ AI ಬಗ್ಗೆ ಪೋಸ್ಟ್ ಮಾಡಬೇಡಿ: ರಾಹುಲ್ ಗೆ ಬಿಜೆಪಿ

ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್- ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ!

ನಟ ಸಲ್ಮಾನ್ ಖಾನ್ ತಂದೆ ಆರೋಗ್ಯ ಏರುಪೇರು: Brain Haemorrhage, ಮುಂಬೈ ಆಸ್ಪತ್ರೆಗೆ ದಾಖಲು!

India AI Impact Summit: ಚೀನಾದ ರೋಬೋಡಾಗ್ ವಿವಾದ; ಸ್ಟಾಲ್ ತೆರವುಗೊಳಿಸಲು ಗಾಲ್ಗೋಟಿಯಾಸ್ ವಿವಿಗೆ ಸೂಚನೆ; Video

'ಬರೀ ಸುಳ್ಳು.. ನಿಮ್ಮಿಂದಾಗಿ ಹೊಟೆಲ್ ನಲ್ಲಿ ಪಾತ್ರೆ ತೊಳೆಯಬೇಕಾಯಿತು': ಪಾಕ್ ವಿರುದ್ಧ ನಾಯಕ Shakeel Ammad Butt ಕಿಡಿ!

SCROLL FOR NEXT