ಮಾಲೀಕನ ಮಾಹಿತಿ ಮಾರಾಟಕ್ಕೆ ಯತ್ನ: ಬೆಂಗಳೂರು ಟೆಕ್ಕಿ ಬಂಧನ
ಬೆಂಗಳೂರಿನ ಟೆಕ್ಕಿಯೊರ್ವ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಮಾಲೀಕನ ಮಾಹಿತಿಯನ್ನು ಮತ್ತೊಂದು ಸಂಸ್ಥೆಗೆ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದು...
ಬೆಂಗಳೂರು: ಬೆಂಗಳೂರಿನ ಟೆಕ್ಕಿಯೊರ್ವ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಮಾಲೀಕನ ಮಾಹಿತಿಯನ್ನು ಮತ್ತೊಂದು ಸಂಸ್ಥೆಗೆ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಕಂಪ್ಯೂಟರ್-ಸಹಾಯದ ವಿನ್ಯಾಸ ಮತ್ತು ಡ್ರಾಫ್ಟಿಂಗ್ ಇಂಜಿನಿಯರ್ ಆಗಿರುವ 23 ವರ್ಷದ ಸುರೇಶ್ ರಾವ್ ಎಂಬುವನು ನ್ಯೂ ಜನರೇಷನ್ ಸಂಸ್ಥೆಗೆ ಡಿಜೈನರ್ ಆಗಿ ಕೆಲಸ ಮಾಡುತ್ತಿದ್ದ. ತುರ್ತಿನಲ್ಲಿ ಹಣ ಸಂಪಾದನೆಗಾಗಿ ಅಡ್ಡ ದಾರಿ ಹಿಡಿದ ಸುರೇಶ್ ಬೇರೊಂದು ಸಂಸ್ಥೆ ಎಸ್ಬಿಟಿ ಅಸೋಸಿಯೇಟ್ಸ್ ಜತೆ ಈ ಸಂಸ್ಥೆಯ ಮಾಹಿತಿಯನ್ನು ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದು ಅದೇ ರೀತಿ ತನ್ನ ಇ-ಮೇಲ್ ನಿಂದ ಆ ಸಂಸ್ಥೆಗೆ ಮಾಹಿತಿ ರವಾನಿಸಿದ್ದ.
ಆದರೆ ಆತನ ಅದೃಷ್ಟ ಕೆಟ್ಟಿತ್ತು ಅನಿಸುತ್ತೆ. ಕಾರಣ ಆತ ಕಳುಹಿಸಿದ ಸಂಸ್ಥೆಯ ಮಾಲೀಕ ಹಾಗೂ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲೀಕರು ಪಾಲುದಾರರಾಗಿದ್ದರು. ಸುರೇಶ್ ನಿಂದ ಬಂದ ಮಾಹಿತಿಯನ್ನು ನೋಡಿದಾಗ ಸಹ ಮಾಲೀಕ ಶಾಕ್ ಆಗಿದ್ದಾನೆ. ತನ್ನ ಪಾಲುದಾರಿಕೆ ಸಂಸ್ಥೆಯ ಮಾಹಿತಿಯನ್ನು ಕಳುಹಿಸಿದ್ದಾನೆ ಎಂದು ತಿಳಿದು ನಂತರ ಇಬ್ಬರು ಸೇರಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನನ್ವಯ ಪೊಲೀಸರು ಸುರೇಶ್ ರಾವ್ ನನ್ನು ಬಂಧಿಸಿದ್ದಾರೆ. ನಂತರ ನ್ಯಾಯಾಲಯದ ಮುಂದೆ ಆತನನ್ನು ಹಾಜರುಪಡಿಸಿದ್ದು ಕೋರ್ಟ್ ಆತನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.