ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.
ಬಂಟ್ವಾಳದ ಸಮೀಪ ಕಂದೂರು ನಿವಾಸಿ ಶರತ್ (28) ಗೆ ಚೂರಿಯಿಂದ ಇರಿಯಲಾಗಿದೆ. ಶರತ್ ಬಿ.ಸಿ.ರೋಡ್ ನಲ್ಲಿರುವ ಲಾಂಡ್ರಿಯೊಂದರ ಮಾಲಿಕರಾಗಿದ್ದಾರೆ. ಅಂಗಡಿ ಮುಚ್ಚಿ ತೆರಳುವ ವೇಳೆ ಈ ದುರ್ಘಟನೆ ನಡೆದಿದೆ.
ಘಟನೆಯಿಂದ ಶರತ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕಾಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಸೂಪರಿಂಡೆಂಟ್ ಸುಧೀರ್ ಕುಮಾರ್ ರೆಡ್ಡಿ ಪರಿಶೀಲನೆ ನಡೆಸಿ ಬಿ.ಸಿ.ರೋಡ್‌ನಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಕೋಮು ಗಲಭೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ 4 ತಾಲೂಕುಗಳಲ್ಲ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಜುಲೈ 11ರ ವರೆಗೂ ಮುಂದುವರಿಯಲಿದೆ.