ಸಾಂದರ್ಭಿಕ ಚಿತ್ರ 
ರಾಜ್ಯ

ನಿಮ್ಮ ಕೋಟ್- ನಮ್ಮ ಪೋಸ್ಟ್ ಗೆ ಭಾರೀ ಸ್ಪಂದನೆ: 5 ಲಕ್ಷ ರೂ. ವೇತನಕ್ಕೆ ಸರ್ಕಾರಿ ವೈದ್ಯರ ಬಿಡ್

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಬೇಡಿಕೆಗೆ ಅನುಗುಣವಾಗಿ ವೇತನ ನೀಡಿ ನೇಮಕ ಮಾಡಿಕೊಳ್ಳಲು ರಾಜ್ಯ ಆರೋಗ್ಯ...

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು  ಬೇಡಿಕೆಗೆ ಅನುಗುಣವಾಗಿ ವೇತನ ನೀಡಿ ನೇಮಕ ಮಾಡಿಕೊಳ್ಳಲು ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ.
ನಿಮ್ಮ ಕೋಟ್ -ನಮ್ಮ ಪೋಸ್ಟ್ ಯೋಜನೆಯಡಿ ಕರೆದಿದ್ದ ವೈದ್ಯರ ನೇಮಕಾತಿ ಯೋಜನೆಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಇರುವ 1,212 ಹುದ್ದೆಗೆ ಆನ್ ಲೈನ್ ನಲ್ಲಿ 2,883 ಅರ್ಜಿಗಳು ಸಲ್ಲಿಕೆಯಾಗಿವೆ. 
ಇದೇ ಮೊದಲ ಬಾರಿಗೆ ಜಾರಿಗೆ ತಂದಿರುವ ವೈದ್ಯರ ಬಿಡ್ ಗೆ  ಅರ್ಜಿ ಹಾಕಿರುವ ವೈದ್ಯರು ಕನಿಷ್ಠ 60 ಸಾವಿರದಿಂದ 5 ಲಕ್ಷದವರೆಗೆ ವೇತನ ಕೋಟ್ ಮಾಡಿದ್ದಾರೆ. ಅತಿ ಕಡಿಮೆ ದರಕ್ಕೆ ಬಿಡ್ ಮಾಡುವ ಅರ್ಜಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.
ಆನ್ ಲೈನ್ ನಲ್ಲಿ ಬಂದಿರುವ ಅರ್ಜಿಗಳ ಪೈಕಿ 519  ಅರಿವಳಿಕೆ ವೈದ್ಯರು, 436 ಜನರಲ್ ಸರ್ಜನ್ಸ್ ಹುದ್ದೆಗೆ ಅರ್ಜಿ ಬಂದಿವೆ. ಅರ್ಜಿ ಸಲ್ಲಿಸಲು ಇನ್ನೂ ಆನ್ ಲೈನ್ ನಲ್ಲಿ ಅವಕಾಶವಿದ್ದು, ಗೂಗಲ್ ಲಿಂಗ್ ಮಾಲಕ www.karhfw.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಶನಿವಾರದೊಳಗೆ ನೇಮಕಾತಿ ಸಮಿತಿ ನಿರ್ಧಾರ ಅಂತಿಮಗೊಳ್ಳಲಿದೆ.
ಈ ಒಂದು ಹೊಸ ರೀತಿಯ ಕಲ್ಪನೆ ಹೇಗೆ ಮೂಡಿತು ಎಂಬ ಪ್ರಶ್ನೆಗೆ ಉತ್ತರಿಸಿದ ಶಾಲಿನಿ ರಜನೀಶ್, ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ, ಮನೋಜ್ ಜಲ್ಹಾನಿ, ಉತ್ತರ ಪ್ರದೇಶದಲ್ಲಿ ಈ ರೀತಿಯ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದರು. ನಾವು ಸಹ ಈ ಯೋಜನೆ ಜಾರಿಗಾಗಿ ಅನುಮತಿ ಪಡೆದವು, ಈ ಎಲ್ಲಾ ಹೆಗ್ಗಳಿಕೆ  ರಾಷ್ಟ್ರೀಯ ಆರೋಗ್ಯ ಮಿಷನ್ ನ ಉತ್ತರ ಪ್ರದೇಶ ಮಿಶನ್ ಡೈರೆಕ್ಟರ್ ಅಲೋಕ್ ಕುಮಾರ್ ಅವರಿಗೆ ಸಲ್ಲಬೇಕು ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ