ರಾಜ್ಯ

ಸಚಿವ ರೋಷನ್ ಬೇಗ್ ಸಹೋದರ ಡಾ. ರೆಹನ್ ಬೇಗ್ ನಿರ್ದೋಷಿ: ಹೈಕೋರ್ಟ್

Shilpa D
ಬೆಂಗಳೂರು: ಬಹುಕೋಟಿ ನಕಲಿ ಛಾಪಾಕಾಗದ ಹಗರಣ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿಗೆ ಮೊದಲ ಬಾರಿಗೆ ಛಾಪಾ ಕಾಗದ ಮಾರಾಟದ ಪರವಾನಗಿ ಕೊಡಿಸಿದ ಆರೋಪ ಎದುರಿಸುತ್ತಿದ್ದ ಸಚಿವ ರೋಷನ್ ಬೇಗ್ ಸಹೋದರ ಡಾ. ರೆಹನಾ ಬೇಗ್ ಅವರನ್ನು ಹೈಕೋರ್ಟ್ ಖುಲಾಸೆ ಗೊಳಿಸಿದೆ.
ಡಾ. ರೆಹನಾ ಬೇಗ್ ಅವರನ್ನು ಖುಲಾಸೆ ಗೊಳಿಸಿ ಅಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು  ಹೈಕೋರ್ಟ್ ವಜಾಗೊಳಿಸಿದೆ.
ಈ ಪ್ರಕರಣದಲ್ಲಿ ರೆಹಾನ್ ಬೇಗ್ ವಿರುದ್ಧ ಗುರುತಿಸಿದ್ದ 60 ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ರೆಹಾನ್ ಬೇಗ್ ಹಣಕಾಸಿನ ಲಾಭ ಪಡೆದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದ ನ್ಯಾಯಪೀಠ ಅಧೀನ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದೆ. 
ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರವಿ ಮಳಿಮಠ್ ಮತ್ತು ಜಾನ್ ಮೈಕೆಲ್ ಚುನಾ ಸಿಬಿಐ ಮೇಲ್ಮನವಿಯನ್ನು ವಜಾಗೊಳಿಸಿದೆ. 
SCROLL FOR NEXT