ಸಾಂದರ್ಭಿಕ ಚಿತ್ರ 
ರಾಜ್ಯ

ಪತ್ನಿ, ಮಗಳ ಎದುರೇ ತಲೆಗೆ ಗುಂಡು ಹಾರಿಸಿಕೊಂಡ ಹಾವೇರಿ ಉದ್ಯಮಿ!

ವ್ಯಾಪಾರದಲ್ಲಿನ ವ್ಯಾಪಕ ನಷ್ಟ ಉಂಟಾಯಿತು ಎಂದು ನೊಂದ ಉಧ್ಯಮಿಯೋರ್ವ ತನ್ನ ಪತ್ನಿ ಮತ್ತು ಮಗಳ ಎದುರೇ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಧಾರುಣ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ: ವ್ಯಾಪಾರದಲ್ಲಿನ ವ್ಯಾಪಕ ನಷ್ಟ ಉಂಟಾಯಿತು ಎಂದು ನೊಂದ ಉಧ್ಯಮಿಯೋರ್ವ ತನ್ನ ಪತ್ನಿ ಮತ್ತು ಮಗಳ ಎದುರೇ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಧಾರುಣ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ ಉಧ್ಯಮ ದೊಡ್ಡ ಕೊಟ್ರೇಶಯ್ಯ ಸುತ್ತಿನಭಾವಿಮಠ (52 ವರ್ಷ) ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಸಾವಿಗೆ ವ್ಯಾಪಾರದಲ್ಲಿನ ನಷ್ಟವೇ ಕಾರಣ ಎಂದು ಹೇಳಲಾಗುತ್ತಿದೆ. ರಾಣೆ  ಬೆನ್ನೂರಿನ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲೇ ದೊಡ್ಡ ಕೊಟ್ರೇಶಯ್ಯ ನಿವಾಸವಿದ್ದು, ತಮ್ಮ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ತಮ್ಮ ವ್ಯಾಪಾರದಲ್ಲಿ ದೊಡ್ಡ ಕೊಟ್ರೇಶಯ್ಯ ಸಾಕಷ್ಟು ನಷ್ಟ ಅನುಭವಿಸಿದ್ದರು. ಅಲ್ಲದೆ ಸಾಕಷ್ಟು ಸಾಲ ಕೂಡ ಮಾಡಿಕೊಂಡಿದ್ದರು. ಈ ಸಾಲ ತೀರಿಸುವ ಸಲುವಾಗಿ ದೊಡ್ಡ ಕೊಟ್ರೇಶಯ್ಯ ತಮ್ಮ ಮಾಲೀಕತ್ವದ  ಭೂಮಿಯನ್ನು ಕೂಡ ಮಾರಿದ್ದರು ಎಂದು ತಿಳಿದುಬಂದಿದೆ. ಇದೀಗ ತಮ್ಮಗೇ ಪರವಾನಗಿ ಇರುವ ಪಿಸ್ತೂಲಿನಿಂದ ದೊಡ್ಡ ಕೊಟ್ರೇಶಯ್ಯ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಸ್ತುತ ರಾಣೆ ಬೆನ್ನೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೊಡ್ಡ ಕೊಟ್ರೇಶಯ್ಯ ಅವರಿಗೆ ಇಬ್ಬರು ಪುತ್ರಿಯರಿದ್ದು, ಈ ಪೈಕಿ ದೊಡ್ಡ ಮಗಳಿಗೆ ಮದುವೆಯಾಗಿದ್ದು, ಆಕೆ  ಮೂಡಬಿದಿರೆಯಲ್ಲಿ ವಾಸಿಸುತ್ತಿದ್ದಾರೆ. ಕಿರಿಯ ಪುತ್ರಿ ಕಾಲೇಜು ವಿದ್ಯಾರ್ಥಿನಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್