ಸಮಾವೇಶಕ್ಕೆ ಬಂದಿದ್ದ ಉಪನ್ಯಾಸಕರು
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ರಾಜ್ಯ ಮಟ್ಟದ ಸಮಾವೇಶಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಬೇಕಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಗಾಗಿ ಸುಮಾರು 2 ಗಂಟೆಗಳ ಕಾಲ ಕಾಯಬೇಕಾಯಿತು.
1 ಗಂಟೆಗೆ ಕಾರ್ಯಕ್ರಮಕ್ಕೆ ಹಾಜರಾಗಬೇಕಿದ್ದ ಸಚಿವರು, ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಮನವಿ ಮಾಡಿಕೊಂಡ ನಂತರ 3ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದರು.
ಇದೇ ವೇಳೆ ಸಚಿವರಿಗಾಗಿ ಕಾದು ಕಾದು ಸುಸ್ತಾಗಿದ್ದ ಉಪನ್ಯಾಸಕರು ಸಮಯ ಕಳೆಯಲು ಡ್ಯಾನ್ಸ್ ಮತ್ತು ಹಾಡಿನ ಮೊರೆ ಹೋದರು.
ತಮ್ಮ ಸಹೋದ್ಯೋಗಿಗಳ ಜೊತೆ ಸೇರಿ, ವೇದಿಕೆ ಮೇಲೆ ತೆರಳಿ ಏಕ ಪಾತ್ರಾಭಿನಯ ,ಹಾಡು ಹೇಳುವುದು ಹಾಗೂ ಡ್ಯಾನ್ಸ್ ಮಾಡಿದರು. ಕೆಲವರು ಜೋಕ್ಸ್ ಹೇಳಿದರು. ವರ್ಷದಲ್ಲಿ ಒಂದು ಬಾರಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಲಾಗುತ್ತದೆ. ಈ ವರ್ಷ ಸಚಿವರು ಬರಬೇಕೆಂಬದು ನಮ್ಮನಿರೀಕ್ಷೆಯಾಗಿತ್ತು ಎಂದು ಮಂಡ್ಯದಿಂದ ಬಂದಿದ್ದ ಉಪನ್ಯಕರೊಬ್ಬರರು ಹೇಳಿದ್ದಾರೆ,.
ಕಾರ್ಯಕ್ರಮಕ್ಕೆ ಬರುವುದಕ್ಕೆ ತಡವಾಗಿದ್ದಕ್ಕೆ ಸ್ಪಷ್ಟನೆ ನೀಡಿದ ಸೇಠ್, ಹಲವು ಮಂದಿ ಬೆಳಗ್ಗೆಯಿಂದ ತಮ್ಮ ನಿವಾಸದಲ್ಲಿ ಕಾಯುತ್ತಿದ್ದರು, ಅವರುಗಳ ಸಮಸ್ಯೆ ಹೇಳಿಕೊಳ್ಳಲು ಕಾಯುತ್ತಿದ್ದರು, ಹೀಗಾಗಿ ಬರಲು ತಡವಾಯಿತು ಎಂದು ಹೇಳಿದ್ದಾರೆ