ರಾಜ್ಯ

ಈ ವರ್ಷದಿಂದ ಎಲ್ಲಾ ಶಾಲೆಗಳಲ್ಲೂ ಕನ್ನಡ ಕಡ್ಡಾಯ: ಇಲ್ಲದಿದ್ದರೇ ಪರವಾನಗಿ ರದ್ಧು

Shilpa D
ಬೆಂಗಳೂರು:  ಈ ವರ್ಷದಿಂದಲೇ ಎಲ್ಲಾ ಶಾಲೆಗಳಲ್ಲೂ ಕನ್ನಡ ಕಡ್ಡಾಯ ಎಂಬ ಆದೇಶವನ್ನು ಸರ್ಕಾರ ಹೊರಡಿಸಿದ್ದು, 1 ನೇ ತರಗತಿಯಿಂದ ಮಕ್ಕಳಿಗೆ ಕನ್ನಡ ಕಲಿಸಲು ಸೂಚಿಸಲಾಗಿದೆ.
ಮೇ 29 ರಂದು ಈ ಸಂಬಂಧ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕನ್ನಡ ಕಲಿಕೆ ಕಡ್ಡಾಯ ಎಂಬುದಾಗಿ ಸೂಚಿಸಿತ್ತು. ಸಿಬಿಎಸ್ ಇ, ಐಸಿಎಸ್ ಸಿ ಮತ್ತು ಕೇಂದ್ರಿಯ ವಿದ್ಯಾಲಯಗಳಲ್ಲಿ ಕನ್ನಡ ಕಲಿಸುವಂತೆ ಆದೇಶ ಹೊರಡಿಸಿದ್ದು, ಪಠ್ಯ ಪುಸ್ತಕಗಳನ್ನು ಇಲಾಖೆಯ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ಒಂದು ವೇಳೆ ಶಾಲೆಗಳು ನಿಯಮ ಉಲ್ಲಂಘಿಸಿದಲ್ಲಿ ಶಾಲೆಗಳಿಗೆ ನೀಡಿರುವ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ವಾಪಸ್ ಪಡೆಯಲಾಗುವುದು ಎಂದು ಸಚಿವರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
1ನೇ ತರಗತಿಯಿಂದ ಕನ್ನಡ ಕಲಿಸಲು ಕಳೆದ ವರ್ಷ 5,400 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಪ್ರಾದೇಶಿಕ ಇಂಗ್ಲಿಷ್ ಸಂಸ್ಥೆಯಲ್ಲಿ ತರಬೇತಿ ಪಡೆದ ನುರಿತ ಶಿಕ್ಷಕರು 4100 ಕ್ಲಸ್ಟರ್ ಗಳಲ್ಲಿ ಇಂಗ್ಲೀಷ್ ಕಲಿಕೆ ಬಗ್ಗೆ ಇತರ ಶಿಕ್ಷಕರಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಸಿಬಿಎಸ್ ಸಿ ಶಾಲೆಗಳು ತ್ರಿಭಾಷಾ ನೀತಿ ಇದೆ, ಪೋಷಕರು ಹಾಗೂ ವಿದ್ಯಾರ್ಥಿಗಳು ಕನ್ನಡವನ್ನು ಎರಡನೇ ಮತ್ತು ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು, ಮಕ್ಕಳಿಗೆ ಮೂಲ ಕನ್ನಡವನ್ನು ಕಲಿಸುವುದಾಗಿದೆ. 
SCROLL FOR NEXT