ರಾಜ್ಯ

ಹೈ-ಕ ಭಾಗಕ್ಕೆ ಸರ್ಕಾರಿ ಶಿಕ್ಷಕರನ್ನು ಸೆಳೆಯಲು ರಾಜ್ಯದಿಂದ ಭತ್ಯೆ ಹೆಚ್ಚಳ!

Srinivas Rao BV
ಬೆಂಗಳೂರು: ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ಸೆಳೆಯಲು, ರಾಜ್ಯದ ಶಿಕ್ಷಣ ಇಲಾಖೆ ಆ ಭಾಗದಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಭತ್ಯೆ ಹೆಚ್ಚಳ ಮಾಡುವ ಪ್ರಸ್ತಾವನೆ ಮುಂದಿಟ್ಟಿದೆ. 
ಹೈ-ಕಾ ಭಾಗದಲ್ಲಿ ಎದುರಾಗಿರುವ ಶಿಕ್ಷಕರ ಕೊರತೆಯನ್ನು ಸರಿದೂಗಿಸಲು ಭತ್ಯೆ ಹೆಚ್ಚಳ ಮಾಡುವ ಪ್ರಸ್ತಾವನೆ ಹೊಂದಿದೆ, ಅಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಮುಂದಾಗುವ ಶಿಕ್ಷಕರಿಗೆ ವಿಶೇಷವಾದ ಯೋಜನೆಗಳನ್ನು ಘೋಷಿಸುವ ಪ್ರಸ್ತಾವನೆ ಇದೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. 
ಶಿಕ್ಷಣ ಇಲಾಖೆ ಇಂಥಹದ್ದೊಂದು ಪ್ರಸ್ತಾವನೆ ಮುಂದಿಟ್ಟಿದ್ದು, 7 ನೇ ವೇತನ ಆಯೋಗದ ಶಿಫಾರಸ್ಸುಗಳು ಜಾರಿಗೆ ಬರುವುದನ್ನು ಕಾಯುತಿದ್ದೇವೆ ಎಂದು ತನ್ವೀರ್ ಸೇಠ್ ಮಾಹಿತಿ ನೀಡಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ ಹೈ-ಕಾ ಭಾಗದಲ್ಲಿ 6,826 ಶಿಕ್ಷಕರ ಹುದ್ದೆಗಳಿದ್ದು, 5,400 ಹುದ್ದೆಗಳು ಖಾಲಿ ಇದ್ದು ಅತಿಥಿ ಶಿಕ್ಷಕರು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯಾದ್ಯಂತ  10,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ರಾಜ್ಯದ ಹಣಕಾಸು ಇಲಾಖೆ ಅನುಮತಿ ನೀಡಿದ್ದು, ಹೈದರಾಬಾದ್ ಕರ್ನಾಟಕ ಪ್ರದೇಶದ ಶಿಕ್ಷಕರಿಗೆ ಶೇ.50 ರಷ್ಟು ಭತ್ಯೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. 
SCROLL FOR NEXT