ಮೈಸೂರು: ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಬಿಜೆಪಿಯವರು ಮಾತ್ರವೇ ಹಿಂದೂಗಳಲ್ಲ, ನಾನೂ ಕೂಡ ಹಿಂದೂ ಎಂದು ಹೇಳಿದ್ದಾರೆ.
ನನ್ನ ಹೆಸರು ಸಿದ್ದರಾಮಯ್ಯ, ನನ್ನ ಹೆಸರಿನಲ್ಲಿ ರಾಮನ ಹೆಸರಿದೆ, ಹೀಗಾಗಿ ನಾನು ಹಿಂದೂ, ಬಿಜೆಪಿಯವರಷ್ಟೇ ಹಿಂದೂಗಳಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುವ ಮೂಲಕ ಬೆಂಕಿ ಹಚ್ಚಲು ಹೊರಟಿದ್ದಾರೆ, ಇಂದಿಗೂ ಆ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಬಿಜೆಪಿ ಚುನಾವಣೆಗೆ ಸಿದ್ಧವಾಗಲು ವಿಸ್ತಾರಕ್ ಕಾರ್ಯತಂತ್ರ ರೂಪಿಸುತ್ತಿರುವುದರ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ವಿಸ್ತಾರಕ್ ಎಂದರೆ ಬಿಜೆಪಿಯ ಪ್ರಕಾರ ಹಿಂದುತ್ವವವನ್ನು ವಿಸ್ತರಿಸುವುದು ಎಂದರ್ಥ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.