ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್‌ಗೆ ಭೇಟಿ ನೀಡಿದ ಚುನಾವಣಾ ಆಯುಕ್ತ ಟಿ.ಎಸ್ ಶ್ರೀನಿವಾಸಾಚಾರಿ
ಮೈಸೂರು: ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಳಿಸಲಾಗದ ಶಾಯಿ ಬದಲಿಗೆ ಮಾರ್ಕರ್ ಪೆನ್ ಬಳಸುವ ಸಂಬಂಧ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿದೆ.
ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್‌ಗೆ ಭೇಟಿ ನೀಡಿದ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್ ಶ್ರೀನಿವಾಸಾಚಾರಿ ಸಾಧಕ–ಬಾಧಕಗಳನ್ನು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆಗಳಿಗೆ 2018ರಲ್ಲಿ ಚುನಾವಣೆ ನಡೆಯಲಿದೆ. ಮತದಾರರ ಬೆರಳಿಗೆ ಶಾಯಿ ಬದಲಿಗೆ ಪೆನ್ ಬಳಕೆ ಮಾಡುವ ಚಿಂತನೆ ಇದೆ. ಇದರ ತಯಾರಿಕೆ, ಗುಣಮಟ್ಟ ಹಾಗೂ ದರ ವ್ಯತ್ಯಾಸದ ಕುರಿತು ಚರ್ಚಿಸಲು ಬಂದಿದ್ದೇನೆ’ ಎಂದು ಹೇಳಿದರು.
ಅಳಿಸಲಾಗದ ಮಾರ್ಕರ್ ಪೆನ್ನೊಂದನ್ನು ಸಾವಿರ ಮತದಾರರಿಗೆ ಬಳಕೆ ಮಾಡಲು ಸಾಧ್ಯವಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮತದಾನ ಪ್ರಮಾಣ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಇದಕ್ಕೆ ಅನುಗುಣವಾಗಿ ಪೆನ್‌ಗಳ ಅಗತ್ಯವಿದೆ. ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈಗಾಗಲೇ ಇದು ಬಳಕೆಯಾಗಿದೆ’ ಎಂದರು.
ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಕಂಪನಿ ಎಚ್.ಎ ವೆಂಕಟೇಶ್, ರಾಷ್ಟ್ರಪತಿ ಚುನಾವಣೆ ವೇಳೆ ಬಳಸಿದ ಪೆನ್ 37.45. ರು ಆಗಿತ್ತು. ಆದರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪ್ರತಿ ಬೂತ್ ನಲ್ಲಿ ಸುಮಾರು 1,500 ಮತದಾರರಿರುತ್ತಾರೆ ಎಂದು ಹೇಳಿದ್ದಾರೆ.