ರಾಜ್ಯ

ಕನ್ನಂಬಾಡಿ ಕಟ್ಟಿಸಿದವರು ವಿಶ್ವೇಶ್ವರಯ್ಯನವರು: ಅರಸ್, ದಲಿತ ಸಮುದಾಯಗಳಲ್ಲಿ ಅಸಮಾಧಾನ ತಂದ ಕನ್ನಡ ಪಾಠದಲ್ಲಿನ ಉಲ್ಲೇಖ

Sumana Upadhyaya
ಮೈಸೂರು: ಕೃಷ್ಣ ರಾಜ ಅಣೆಕಟ್ಟು ನಿರ್ಮಿಸಿದ ಕೀರ್ತಿಯನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. 
ಕರ್ನಾಟಕ ರಾಜ್ಯ ಸರ್ಕಾರದ 2ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿರುವ ಪಾಠವೊಂದು ದಲಿತ ಮತ್ತು ಅರಸ್ ಸಮುದಾಯದವರನ್ನು ಕೆರಳಿಸಿದೆ. ಪಾಠದಲ್ಲಿ ಕನ್ನಂಬಾಡಿ ಅಣೆಕಟ್ಟು ನಿರ್ಮಾಣದ ಕೀರ್ತಿಯನ್ನು ಸರ್ ಎಂ.ವಿಶ್ವೇಶ್ವರಯ್ಯನವರಿಗೆ ಸಲ್ಲಿಸಿದೆ. ಆದರೆ ನಿರ್ಮಾಣದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲಬೇಕು ಎಂಬುದು ಅರಸ್ ಮತ್ತು ದಲಿತ ಸಂಘಟನೆಗಳ ವಾದವಾಗಿದೆ. 
ಅವರ ಪ್ರಕಾರ, ಅಣೆಕಟ್ಟು ಕಟ್ಟುವಾಗ ಅದರ ಉಸ್ತುವಾರಿ ನೋಡಿಕೊಂಡ ಏಳು ಎಂಜಿನಿಯರ್ ಗಳ ಪೈಕಿ ಸರ್.ಎಂ.ವಿಶ್ವೇಶ್ವರಯ್ಯನವರು ಒಬ್ಬರು. ನಾಲ್ವಡಿ ಕೃಷ್ಣರಾಜ ಒಡೆಯರ್ ರಿಂದಲೇ ಅಣೆಕಟ್ಟು ಸಂಪೂರ್ಣವಾಗಲು ಸಾಧ್ಯವಾಯಿತು.ಅಣೆಕಟ್ಟು ನಿರ್ಮಾಣಕ್ಕೆ ಹಣ ಒದಗಿಸಲು ಅವರು ತಮ್ಮ ಪತ್ನಿಯ ಚಿನ್ನವನ್ನು ಸಹ ಅಡವಿಟ್ಟಿದ್ದರು. ಈ ವರ್ಷ ಪಠ್ಯಪುಸ್ತಕವನ್ನು ಪರಿಷ್ಕರಿಸಿದರೂ ಕೂಡ ಅದೇ ತಪ್ಪು ಪುನರಾವರ್ತನೆಯಾಗಿದೆ ಎಂದು ಆರೋಪಿಸುತ್ತಾರೆ.
ಬರಹಗಾರ ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಪಠ್ಯಪುಸ್ತಕಗಳಲ್ಲಿ ದೋಷಗಳನ್ನು ಕೇಂದ್ರೀಕರಿಸಲು ಮತ್ತು ದೋಷಗಳನ್ನು ತೆಗೆದುಹಾಕಲು ಅಧಿಕಾರವನ್ನು ನೀಡಿತ್ತು. ಸಮಿತಿಯ ವರದಿಗಳನ್ನು ಒಪ್ಪಿಕೊಂಡ ರಾಜ್ಯ ಸರ್ಕಾರ ಒಂದನೇ ತರಗತಿಯಿಂದ 8ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿತು. ನಾನು ಕನ್ನಂಬಾಡಿ ಕಟ್ಟೆ ಎಂಬ ಪುಸ್ತಕವನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವ ಇತಿಹಾಸತಜ್ಞ ಪ್ರೊ.ಪಿ.ವಿ.ನಾಗರಾಜ್ ಅರಸ್, ಕೆಆರ್ಎಸ್ ನಿರ್ಮಾಣದ ಕೀರ್ತಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲಿಸುತ್ತಾರೆ. 
ಪುಸ್ತಕವನ್ನು ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಠ್ಯಪುಸ್ತಕದಲ್ಲಿ ಆಗಿರುವ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದು, ತಾವು ರಾಮಚಂದ್ರಪ್ಪ ಅವರಿಗೆ ಅದನ್ನು ತಿದ್ದಲು ಹೇಳುವುದಾಗಿ ತಿಳಿಸಿದ್ದಾರೆ.
SCROLL FOR NEXT