ಬೆಂಗಳೂರು: ಕೋಲಾರ ಸ್ವತಂತ್ರ್ಯ ಶಾಸಕ ವರ್ತೂರು ಪ್ರಕಾಶ್ ಪತ್ನಿ ಶಾಮಲಾ ಇಂದು ಸಾವನ್ನಪ್ಪಿದ್ದಾರೆ.
ವರ್ತೂರ್ ಪ್ರಕಾಶ್ ಅವರ ಪತ್ನಿ ಶ್ಯಾಮಲಾ ಡೆಂಗ್ಯೂ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಒಂದು ವಾರದಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು,
ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 45 ವರ್ಷದ ಶ್ಯಾಮಲಾ ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ.