ರಾಜ್ಯ

ಅರ್ನಬ್ ಗೋಸ್ವಾಮಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಚಿವ ಕೆ.ಜೆ ಜಾರ್ಜ್

Shilpa D
ಬೆಂಗಳೂರು: ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಪತ್ರಕರ್ತ ಅರ್ನಬ್‌ ಗೋಸ್ವಾಮಿ ಹಾಗೂ ‘ಟೈಮ್ಸ್‌ ನೌ’ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಐಎಎಸ್‌ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ಸುದ್ದಿ ಪ್ರಕಟಿಸಿ ನನ್ನ ಘನತೆ ಹಾಗೂ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನಗರದ ಮೆಯೋಹಾಲ್‌ನಲ್ಲಿರುವ 10ನೇ ಎಸಿಎಂಎಂ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಅರ್ಜಿ ಪರಿಶೀಲಿಸಿದ  ನ್ಯಾಯಾಲಯವು  ವಿಚಾರಣೆಯನ್ನು ಆಗಸ್ಟ್‌ 19ಕ್ಕೆ ಮುಂದೂಡಿತು.
ಮಾರ್ಚ್ 16, 2015ರಲ್ಲಿ ನಾನು ಗೃಹ ಸಚಿವನಾಗಿದ್ದ ವೇಳೆ ಐಎಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಪ್ರಕರಣದಲ್ಲಿ ನನ್ನ ಕೈವಾಡ ಇದೆ ಎಂದು ಅರ್ನಬ್‌ ಗೋಸ್ವಾಮಿ ಅವರು ‘ಟೈಮ್ಸ್‌ ನೌ’ ವಾಹಿನಿಯಲ್ಲಿ ಸುಳ್ಳು ಸುದ್ದಿ ಪ್ರಕಟಿಸಿದ್ದರು’ ಎಂದರು. ಮಾರ್ಚ್ 17 ಮತ್ತು 23 ರಂದು ಜಾರ್ಜ್ ವಿರುದ್ಧ 46 ಹೇಳಿಕೆಗಳನ್ನು ಟೈಮ್ಸ್ ನೌ ಪ್ರಸಾರ ಮಾಡಿತ್ತು ಎಂದು ಹೇಳಿದ್ದಾರೆ. 
ಸದ್ಯ ರಿಪಬ್ಲಿಕ್‌ ವಾಹಿನಿಯ ಮುಖ್ಯಸ್ಥರಾಗಿರುವ ಅರ್ನಬ್‌, ಅಂದು ‘ಟೈಮ್ಸ್‌ ನೌ’ ವಾಹಿನಿಯ ಮುಖ್ಯ ಸಂಪಾದಕರಾಗಿದ್ದರು ಎಂದು ಜಾರ್ಜ್‌ ಪರ ವಕೀಲ ಅಜೇಶ್‌ಕುಮಾರ್‌ ಶಂಕರ್‌ ತಿಳಿಸಿದ್ದಾರೆ.
SCROLL FOR NEXT