ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣಕ್ಕೆ ಪ್ರವೇಶ ನೀಡದೇ ನನ್ನನ್ನು ಅವಮಾನಿಸಲಾಯಿತು ಎಂದು ಹುಬ್ಬಳ್ಳಿ-ಧಾರವಾಡ ಅವಳಿನಗರದ ಪಾಲಿಕೆಯ ಮೇಯರ್ ಡಿ.ಕೆ.ಚವಾಣ್ ದೂರಿದ್ದಾರೆ.
ಶಿಷ್ಟಾಚಾರ ಪ್ರಕಾರ ನಗರದ ಪ್ರಥಮ ಪ್ರಜೆ ಮೇಯರ್ ಗೆ ವಿಐಪಿ ಆತಿಥ್ಯ ನೀಡಬೇಕು, ಆದರೆ ವಿಮಾನ ನಿಲ್ದಾಣದಲ್ಲಿ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಗಾಗಿ ಹಾವೇರಿಗೆ ತೆರಳುತ್ತಿದ್ದರು. ಈ ವೇಳೆ ಏರ್ ಪೋರ್ಟ್ ಲಾಂಜ್ ನಲ್ಲಿ ನಡೆದಾಡುತ್ತಿದ್ದ ಮೇಯರ್ ಗೆ ಪ್ರವೇಶ ನಿರಾಕರಿಸಲಾಯಿತು.
ಇದೇ ವೇಳೆ ಮಾಧ್ಯಮದವರು ಕೂಡ ಲಾಂಜ್ ನಲ್ಲಿ ಸಿಎಂ ಗಾಗಿ ಕಾಯುತ್ತಿದ್ದರು. ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಂತೆ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದ್ದಾರೆ.
ಹುಬ್ಬಳ್ಳಿಗೆ ಸಿಎಂ ಸಿದ್ದರಾಮಯ್ಯ ನವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಸಿಎಂ ರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ತೆರಳಿದ್ದೆ, ಆದರೆ ಇಬ್ಬರು ಅಧಿಕಾರಿಗಳು ನಾನು ಸಿಎಂ ಗೆ ಸ್ವಾಗತ ತೋರಲು ನನಗೆ ಅವಕಾಶ ನೀಡಲಿಲ್ಲ ಎಂದು ಕಿಡಿ ಕಾರಿದ್ದಾರೆ.
ನನಗೆ ಅವಮಾನ ಮಾಡುತ್ತಿರುವುದು ಇದೇ ಮೊದಲಲ್ಲ, ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಆದೇಶದಂತೆ ಅಧಿಕಾರಿಗಳು ನದೆಡುಕೊಳ್ಳುತ್ತಿದ್ದಾರೆ. ಇದನ್ನು ಖಂಡಿಸಿ ನಾನು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ, ಮೂರನೇ ಬಾರಿ ನನಗೆ ಇದೇ ಸ್ಥಳದಲ್ಲಿ ನನಗೆ ಇಂಥಹ ಅವಮಾನವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ, ಸಿಎಂ ಆಗಮನದ ಹಿನ್ನೆಲೆಯಲ್ಲಿ ಯಾರೋಬ್ಬರಿಗೂ ಪ್ರವೇಶ ನೀಡಿರಲಿಲ್ಲ, ನಾನು ಮತ್ತು ಪೊಲೀಸ್ ಕಮಿಷನರ್ ಮಾತ್ರ ಸಿಎಂ ಅವರನ್ನು ಬರ ಮಾಡಿಕೊಂಡೆವು, ಶಾಸಕರು ಮತ್ತು ಎಂಎಲ್ ಸಿಗಳು ಕೂಡ ಲಾಂಜ್ ಬಳಿಯಿದ್ದರು. ಇದರಲ್ಲಿ ಮೇಯರ್ ಗೆ ಅವಮಾನ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics