ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕುರಾನ್‌ ಪಠಣಕ್ಕಾಗಿ ಸೌದಿ ಅರೇಬಿಯಾಗೆ ತೆರಳಿದ ಕೊಪ್ಪಳ ಮಹಿಳೆಗೆ ಕಿರುಕುಳ

ಕೊಪ್ಪಳದಿಂದ ತೆರಳಿದ್ದ ಮುಸ್ಲಿಂ ಮಹಿಳೆಗೆ ಸೌದಿ ಅರೇಬಿಯಾದಲ್ಲಿ ಕಿರುಕುಳ ನೀಡಲಾಗಿದೆ. ಒನ್ ಬಾಬಾ ಜಾನ್‌ ಎಂಬುವವರ ಪತ್ನಿ ಚಾಂದ್‌ ಸುಲ್ತಾನಾ ಅವರಿಗೆ..

ಪತ್ನಿ ಸುಲ್ತಾನಾ ಜೊತೆ ಬಾಬಾ ಜಾನ್
Shilpa D
Updated On : 31 Jul 2017, 4:55 am
ಕೊಪ್ಪಳ:  ಕೊಪ್ಪಳದಿಂದ ತೆರಳಿದ್ದ ಮುಸ್ಲಿಂ ಮಹಿಳೆಗೆ ಸೌದಿ ಅರೇಬಿಯಾದಲ್ಲಿ ಕಿರುಕುಳ ನೀಡಲಾಗಿದೆ.  ಒನ್ ಬಾಬಾ ಜಾನ್‌ ಎಂಬುವವರ ಪತ್ನಿ ಚಾಂದ್‌ ಸುಲ್ತಾನಾ ಅವರಿಗೆ ಸೌದಿ ಅರೇಬಿಯಾದಲ್ಲಿ ಚಿತ್ರ ಹಿಂಸೆ ಗೆ ಗುರಿಯಾಗಿದ್ದಾರೆ.
ಬಾಬಾ ಜಾನ್ ಪತ್ನಿ ಸೇರಿದಂತೆ ಹಲವು ಮುಸ್ಲಿಂ ಮಹಿಳೆಯರು ಸೌದಿಯಲ್ಲಿ ಕುರಾನ್‌ ಪಠಣ ಮತ್ತು ಅರೇಬಿಕ್‌ ಶಿಕ್ಷಣ ಕಲಿಸುವ ಕೆಲಸ ಕೊಡಿಸುವುದಾಗಿ ಮಂಗಳೂರಿನ ಶಂಶೀರ್‌ ಎಂಬ ಏಜೆಂಟ್‌ ಒಬ್ಬ ತಿಳಿಸಿದ್ದ. ಇದಕ್ಕೆ ಮಾಸಿಕ ರು 40 ಸಾವಿರ ವೇತನ ಕೊಡಿಸುವುದಾಗಿಯೂ ನಂಬಿಸಿದ್ದ. ಮೂರು ತಿಂಗಳ ಹಿಂದೆ ಮಹಿಳೆಯನ್ನು ಕರೆದೊಯ್ಯದಿದ್ದ.
ಆದರೆ, ಬಳಿಕ ಅವರು ಕುಟುಂಬದ ಸಂಪರ್ಕ ಕಳೆದುಕೊಂಡಿದ್ದಾರೆ. ಆದರೆ ಪತಿಗೆ ಕರೆ ಮಾಡಿದ್ದ  ಬಾಬಾ ಜಾನ್ ಪತ್ನಿ ಸುಲ್ತಾನಾ, ತಮ್ಮನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದು, ಆಹಾರ ನೀಡುತ್ತಿಲ್ಲ ಎಂದು ಹೇಳಿದ್ದಾರೆ.  

Advertisement

Advertisement

ಬಾಬಾ ಜಾನ್‌ ಅವರು ಈ ವಿಚಾರವನ್ನು ಸಂಸದ ಸಂಗಣ್ಣ ಕರಡಿ ಅವರ ಗಮನಕ್ಕೆ ತಂದಿದ್ದು, ತಾವು ಕೂಡಲೇ ವಿದೇಶಾಂಗ ಸಚಿವರೊಂದಿಗೆ ಚರ್ಚಿಸಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments