ಬೆಂಗಳೂರು: ಮೇ. 31 ರಂದು ನಗರದ ಹೊರ ಭಾಗದಲ್ಲಿ ನಡೆದಿದ್ದ ಬಿಜೆಪಿ ನಾಯಕನ ಹತ್ಯೆಯ ಪ್ರಮುಖ ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸಿದ್ದು, ರಾಜಕೀಯ ಕಾರಣಗಳಿಗಾಗಿ ನಡೆದ ಹತ್ಯೆಯಲ್ಲ ಎಂಬುದನ್ನು ಆರೋಪಿ ಹೇಳಿದ್ದಾನೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿ ವಿವಾದವೊಂದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕನನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮೇ.31 ರಂದು ಸೂರ್ಯನಗರದಲ್ಲಿ ಬಿಜೆಪಿ ಎಸ್ ಸಿ, ಎಸ್ ಟಿ ಮೋರ್ಚಾದ ಉಪಾಧಿಯಕ್ಷ ಹರೀಶ್(40) ನ್ನು ಹತ್ಯೆ ಮಾಡಲಾಗಿತ್ತು.
ಬಂಧಿತ ಪ್ರಮುಖ ಆರೋಪಿ ರಾಜು ಹಿರಿಯ ಪೊಲೀಸ್ ಅಧಿಕಾರಿಯ ಮೇಲೂ ದಾಳಿ ನಡೆಸಿದ್ದು, ಹಿರಿಯ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ ಪರಿಣಾಮ ರಾಜುಗೆ ಗಾಯಗಳಾಗಿವೆ. ಹತ್ಯೆಯ ಬೆನ್ನಲ್ಲೇ ರಾಜು, ಸಂದೀಪ್, ಕಾರ್ತಿಕ್, ಸಂತೋಷ್ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಆನೇಕಲ್ ಬಳಿಯಿರುವ ಕೆರೆಯಲ್ಲಿ ಮೀನುಗಾರಿಕೆ ನಡೆಸದಂತೆ ರಾಜು ತನ್ನನ್ನು ತಡೆದಿದ್ದರು ಇದನ್ನು ಪ್ರಶ್ನಿಸಿದ್ದಕ್ಕೆ ರಾಜು ಸಹೋದರರನ್ನು ಹರೀಶ್ ನಿಂದಿಸಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಾಜು ತಮ್ಮ ಸಹೋದರರೊಟ್ಟಿಗೆ ಸೇರಿ ಹರೀಶ್ ಹತ್ಯೆಗೆ ಸಂಚು ರೂಪಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics