ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಅತ್ಯಾಚಾರದ ನಂತರ ಬಾಲಕಿಯನ್ನು ಕೊಲ್ಲಲು ಯತ್ನಿಸಿದ್ದ ಆರೋಪಿ

ನಾಗವಾರ ಸಮೀಪದ ವೈಯಾಲಿಕಾವಲ್ ಸೊಸೈಟಿ ಪ್ರದೇಶದಲ್ಲಿ ಐದು ವರ್ಷದ ಹಸುಳೆ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಮೋರಿ ಪಕ್ಕ ಬಿಸಾಡಿ ...

ಬೆಂಗಳೂರು: ನಾಗವಾರ ಸಮೀಪದ ವೈಯಾಲಿಕಾವಲ್ ಸೊಸೈಟಿ ಪ್ರದೇಶದಲ್ಲಿ ಐದು ವರ್ಷದ ಹಸುಳೆ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಮೋರಿ ಪಕ್ಕ ಬಿಸಾಡಿ ಹೋಗಿದ್ದ ವೀರೇಶ್‌ (24) ಎಂಬ ಕೂಲಿ ಕಾರ್ಮಿಕನನ್ನು ಕೃತ್ಯ ನಡೆದ 12 ತಾಸಿನಲ್ಲೇ ಪೊಲೀಸರು ಸೆರೆ ಹಿಡಿದಿದ್ದಾರೆ. ವಿರೇಶ್ ಬಾಲಕಿಯನ್ನು ಕೊಲ್ಲಲು ಯತ್ನಿಸಿ ಸಾಕ್ಷಿ ನಾಶ ಮಾಡಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 2 ಗಂಟೆ ಸುಮಾರಿಗೆ ಬಾಲಕಿ ಮೂತ್ರ ವಿಸರ್ಜನೆ ಮಾಡಲು ಗುಡಿಸಲಿನಿಂದ ಆಚೆ ಬಂದಿದ್ದಳು. ಅದೇ ಸಮಯದಲ್ಲಿ ವೀರೇಶ್ ಸಹ ಬೀಡಿ ಸೇದಲು ಹೊರ ಬಂದಿದ್ದ. ಮಾತನಾಡಿಸುವ ನೆಪದಲ್ಲಿ ಹತ್ತಿರ ಹೋದ ಆತ, ಆಕೆಯನ್ನು ಹೊತ್ತುಕೊಂಡು ಸಮೀಪದ ಕಾಲೇಜುವೊಂದರ ವಾಹನ ನಿಲುಗಡೆ ಪ್ರದೇಶಕ್ಕೆ ಕರೆದೊಯ್ದಿದ್ದಾಗಿ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವೀರೇಶ್, ಸುಮ್ಮನೆ ಬಿಟ್ಟರೆ ಪೋಷಕರಿಗೆ ಹೋಗಿ ಹೇಳುತ್ತಾಳೆಂದು ಕಲ್ಲಿನಿಂದ ತಲೆಯನ್ನು ಜಜ್ಜಿದ್ದ. ತೀವ್ರ ರಕ್ತಸ್ರಾವವಾಗಿ ಆಕೆ ಸ್ವಲ್ಪ ಸಮಯದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದಳು.
ಸತ್ತು ಹೋದಳೆಂದು ಭಾವಿಸಿದ ಆರೋಪಿ, ಆಕೆಯನ್ನು ಪುನಃ ಎತ್ತಿಕೊಂಡು ಬಂದು ಗುಡಿಸಲಿನಿಂದ 500 ಮೀಟರ್ ದೂರದಲ್ಲಿರುವ ಮೋರಿ ಬಳಿ ಎಸೆದಿದ್ದ. ಅಪಘಾತದಿಂದ ಮೃತಪಟ್ಟಿದ್ದಾಳೆ ಎಂದು ಬಿಂಬಿಸುವುದು ಆತನ ಉದ್ದೇಶವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ರಾತ್ರಿ 3 ಗಂಟೆ ಸುಮಾರಿಗೆ ಎಚ್ಚರಗೊಂಡ ಸಂತ್ರಸ್ತೆಯ ತಾಯಿ, ಸುತ್ತಮುತ್ತಲ ರಸ್ತೆಗಳಲ್ಲೆಲ್ಲ ಮಗಳಿಗಾಗಿ ಹುಡುಕಾಟ ನಡೆಸಿದ್ದರು. ಆಗ ಆ ಸ್ಥಳೀಯ ವ್ಯಕ್ತಿಯು ‘ಪ್ರಜ್ಞೆ ತಪ್ಪಿ ಬಿದ್ದಿದ್ದ ಮಗುವನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು’ ಎಂದು ತಿಳಿಸಿದ್ದರು. ಕೂಡಲೇ ತಾಯಿ ಪತಿಯನ್ನು ಕರೆದುಕೊಂಡು ಅಲ್ಲಿಗೆ ತೆರಳಿದ್ದರು.
ವಿರೇಶ್ ಪತ್ನಿ ಗರ್ಭಿಣಿಯಾಗಿದ್ದು, ಆಕೆ ತವರಿಗೆ ತೆರಳಿದ್ದಳು. ಘಟನೆ ನಡೆದ ನಂತರ ಆಕೆ ಬೆಂಗಳೂರಿಗೆ ಬಂದಿದ್ದಾಳೆ, ಈ ದಂಪತಿಗೆ ಎರಡು ಮಕ್ಕಳಿವೆ. ಈತ ಈ ಮೊದಲು ಯಾವುದೇ ಅಪರಾಧ ಪ್ರಕ್ರಿಯೆಗಳಲ್ಲಿ ಭಾಗವಹಿಸಿಲ್ಲ, 
ಸಂತ್ರಸ್ತೆ ಪೋಷಕರು ಬಾಲಕಿಯನ್ನು ಹುಡುಕುವಾಗ ವಿರೇಶ್ ಕೂಡ ಬಾಲಕಿಯನ್ನು ಹುಡುಕಲು ಜೊತೆಗೆ ತೆರಳಿದ್ದ. ಬಾಲಕಿ ಸಿಕ್ಕ ನಂತರ ಪೋಷಕರು ಆಸ್ಪತ್ರೆಗೆ ತೆರಳಿದ ನಂತರ ವಿರೇಶ್ ತನ್ನ ಶೆಡ್ ಗೆ ಹೋಗಿ ಮಲಗಿದ್ದ.
ಕೆಲ ಯುವಕರನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದ ವೇಳೆ, ವಿರೇಶ್ ಶೌಚಾಯಲಯಕ್ಕೆ ತೆರಳಿ ತನ್ನ ಅಂಡರ್ ವೇರ್ ನಲ್ಲಿದ್ದ ರಕ್ತದ ಕಲೆ ತೊಳೆಯಲು ಪ್ರಯತ್ನಿಸುತ್ತಿದ್ದ, ಆತನ ವರ್ತನೆ ನೋಡಿ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT