12 ವರ್ಷಗಳ ಬಳಿಕ ಕೊನೆಗೂ ಪೋಷಕರ ಮಡಿಲು ಸೇರಿದ ಯುವಕ! 
ರಾಜ್ಯ

ಸಿನಿಮೀಯ ಘಟನೆ: 12 ವರ್ಷಗಳ ಬಳಿಕ ಕೊನೆಗೂ ಪೋಷಕರ ಮಡಿಲು ಸೇರಿದ ಯುವಕ!

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಿನಿಮೀಯ ಘಟನೆಯೊಂದು ನಡೆದಿದೆ. ಕಳೆದುಹೋಗಿದ್ದ ಯುವಕನೊಬ್ಬ 12 ವರ್ಷಗಳ ಬಳಿಕ ಕೊನೆಗೂ ಪೋಷಕರು ಮಡಿಲು ಸೇರಿದ್ದಾನೆ...

ಶಿವಮೊಗ್ಗ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಿನಿಮೀಯ ಘಟನೆಯೊಂದು ನಡೆದಿದೆ. ಕಳೆದುಹೋಗಿದ್ದ ಯುವಕನೊಬ್ಬ 12 ವರ್ಷಗಳ ಬಳಿಕ ಕೊನೆಗೂ ಪೋಷಕರು ಮಡಿಲು ಸೇರಿದ್ದಾನೆ. 
ಕೆಲ ದಿನಗಳ ಹಿಂದಷ್ಟೇ ಟಿವಿಯಲ್ಲ ಮೆಗ್ಗಾನ್ ಆಸ್ಪತ್ರೆಯ ಬಗ್ಗೆ ಸುದ್ದಿಗಳು ವೈರಲ್ ಆಗಿತ್ತು. ಸ್ಟ್ರೆಚರ್ ಇಲ್ಲದೆ ವೃದ್ದರೊಬ್ಬರನ್ನು ಆಕೆಯ ಪತ್ನಿ ನೆಲದಲ್ಲಿ ದರದರನೆ ಎಳೆದುಕೊಂಡು ಹೋಗುತ್ತಿದ್ದ ದೃಶ್ಯವು ಮೆಗ್ಗಾನ್ ಆಸ್ಪತ್ರೆಯ ವಿರುದ್ಧ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. 
ಇದೀಗ ಇದೇ ವಿಡಿಯೋ 12 ವರ್ಷದಿಂದ ಕಳೆದುಹೋದ ಪುತ್ರನೊಬ್ಬ ಹೆತ್ತವರಿಗೆ ದೊರಕಿರುವ ಪ್ರಸಂಗ ನಡೆದಿದೆ. 
ಅಪಘಾತವೊಂದರಲ್ಲಿ ಸ್ಮರಣೆ ಕಳೆದುಕೊಂಡು 12 ವರ್ಷದಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿದ್ದ ಮಾತು ಬಾರತ ಯುವಕ ಜವರೇಗೌಡನಿಗೆ ಕೊನೆಗೂ ಪೋಷಕರ ಆಸರೆ ಸಿಕ್ಕಿದೆ. ಇತ್ತೀಚೆಗೆ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ಆಸ್ಪತ್ರೆ ಸುದ್ದಿಯನ್ನು ನೋಡಿ ಆತನ ತಂದೆ-ತಾಯಂದಿರು ಇವನೇ ನಮ್ಮ ಮಗ ಎಂದು ಹುಡುಕಿಕೊಂಡು ಬಂದಿದ್ದಾರೆ. 
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದ ಶಿವಣ್ಣ-ರತ್ನಮ್ಮ ದಂಪತಿಗೆ ಹಿರಿಯ ಮಗ ಈ ಜವರೇಗೌಡ ಎಂಬುದು ಇದೀಗ ಗೊತ್ತಾಗಿದೆ. 
12 ವರ್ಷಗಳ ಹಿಂದೆ ರಸ್ತೆ ಅಪಘಾತವಾಗಿ ಬಿದ್ದಿದ್ದ 12-13 ವರ್ಷದ ಬಾಲಕನನ್ನು ಯಾರೋ ಮೆಗ್ಗಾನ್ ಆಸ್ಪತ್ರೆಗೆ ತಂದು ದಾಖಲಿಸಿದ್ದರು. ಬದುಕುವುದೇ ಇಲ್ಲ ಎಂದುಕೊಂಡಿದ್ದ ಆತ 1 ವರ್ಷ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೂ ಚೇತರಿಸಿಕೊಂಡಿದ್ದ. ಮಗುವಿಗಾಗಿ ಸಾಕಷ್ಟು ಹುಡುಕಾಟ ನಡೆಸಿ, ಜಾಹೀರಾತು ನೀಡಿ ಪೊಲೀಸರ ಮೊರೆ ಹೋದರು ಬಾಲಕ ಸಿಕ್ಕಿರಲಿಲ್ಲ. ತಲೆಗೆ ಪೆಟ್ಟಾಗಿದ್ದರಿಂದಾಗಿ ಬೇರೆಡೆ ಕಳುಹಿಸುವಂತೆಯೂ ಇರಲಿಲ್ಲ. ಕೊನೆಗೆ ಆಸ್ಪತ್ರೆಯ ದಾದಿಯರೇ ಮಗುವನ್ನು ಸಾಕಲು ನಿರ್ಧರಿಸಿ ನಾಮಕರಣವನ್ನು ಮಾಡಿದ್ದರು. ನರ್ಸ್ ಪೊನ್ನಮ್ಮ ಅವರು ಜವರೇಗೌಡನಿಗೆ ದೇವರ ಮಗ ಎಂದು ನಾಮಕರಣ ಮಾಡಿದ್ದರು. 
ಈಗ ಈತ 25 ವಕ್ಷದ ಯುವಕನಾಗಿದ್ದು, ಆಸ್ಪತ್ರೆಯಲ್ಲಿಯೇ ಸಣ್ಣಪುಟ್ಟ ಕೆಲ ಮಾಡಿಕೊಂಡಿದ್ದ. ಆಸ್ಪತ್ರೆಯ ಕ್ಯಾಂಟೀನ್ ಈತನ ಆವಾಸವಸ್ಥಾನವಾಗಿದೆ. ಆಸ್ಪತ್ರೆಯ ಒಳರೋಗಿಗಳಿಗೆ ಊಟ ವಿತರಣೆ ಮಾಡುವುದನ್ನು ದಾದಿಯರೇ ಕಲಿಸಿಕೊಟ್ಟಿದ್ದಾರೆ. 
ಇದೀಗ ಯುವಕ ತಮ್ಮ ಮಗನೆಂದು ಹೇಳಿಕೊಂಡು ಪೋಷಕರು ಬಂದಿರುವ ಹಿನ್ನಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕರು ನಿಯಮದಂತೆಯೇ ದೇವರ ಮಗನನ್ನು ಪೋಷಕರಿಗೆ ಒಪ್ಪಿಸಲು ನಿರ್ಧರಿಸಿದ್ದಾರೆ. ಪೊಲೀಸರ ಸಮಕ್ಷಮದಲ್ಲಿ ಡಿಎನ್ ಎ ಪರೀಕ್ಷೆ ನಡೆಸಿದ ಬಳಿಕ ಸರ್ಕಾರಿ ನಿಯಮಗಳ ಪ್ರಕಾರವೇ ದೇವರ ಮಗ ತಂದೆತಾಯಿಗಳ ಜವರೇಗೌಡನಾಗಿ ಸೇರಲಿದ್ದಾನೆ. 
ಮಗನಿಗಾಗಿ ಸಾಕಷ್ಟು ಹುಡುಕಾಡಿದ್ದೆವು. ಆದರೆ, ಸಿಕ್ಕಿರಲಿಲ್ಲ. ಸೋಮವಾರ ಬೆಳಿಗ್ಗೆ ಟಿವಿಗಳಲ್ಲಿ ಬಂದ ವಿಡಿಯೋಗಳಲ್ಲಿ ಮಗ ಕಾಣಿಸಿಕೊಂಡಿದ್ದ ಎಂದು ನಿಂಗಮ್ಮ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

SCROLL FOR NEXT