ರಾಜ್ಯ

ಖೋಟಾನೋಟು: ಧಾರಾವಹಿ ನಟಿ ಸೇರಿ ಇಬ್ಬರ ಬಂಧನ

Manjula VN
ನೆಲಮಂಗಲ: ರು.2 ಸಾವಿರ ಮುಖಬೆಲೆಯ ಖೋಟಾನೋಟು ಚಲಾವಣೆ ಮಾಡುತ್ತಿದ್ದ ಧಾರಾವಾಹಿ ನಟಿ ಮತ್ತು ಆಟೋ ಚಾಲಕನೊಬ್ಬನನ್ನು ಗುರುವಾರ ಬಂಧನಕ್ಕೊಳಪಡಿಸಲಾಗಿದೆ. 
ಆಂಧ್ರದ ಅನಂತಪುರ ಮೂಲದ, ಹಾಲಿ ಬೆಂಗಳೂರು ನಗರದ ನಂದಿನಿ ಲೇಔಟ್ ನಿವಾಸಿ, ಧಾರಾವಾಹಿ ನಟಿ ಜಯಮ್ಮ (45), ಆಟೋ ಚಾಲಕ ಗೋವಿಂದ ರಾಜು ಬಂಧಿತ ಆರೋಪಿಗಳಾಗಿದ್ದಾರೆ. 
ಬಂಧಿತರಿಂದ ರು.2 ಸಾವಿರ ಮುಖಬೆಲೆಯ 20ಕ್ಕೂ ಹೆಚ್ಚು ಖೋಟಾ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಆಟೋದಲ್ಲಿ ಬೆಂಗಳೂರಿನ ಹೊರಭಾಗದಲ್ಲಿ ಸಂಚರಿಸಿ, ಹೆದ್ದಾರಿ ಬದಿಯಲ್ಲಿರುವ ಅಂಗಡಿಗಳಿಂದ ತಿಂಡಿ, ತಿನಿಸು, ಸಣ್ಣಪುಟ್ಟ ವಸ್ತುಗಳನ್ನು ಖರೀದಿಸುತ್ತಿದ್ದರು. 
ಅಂಗಡಿ ಮಾಲೀಕರಿಗೆ ರೂ.2 ಸಾವಿರ ಖೋಟಾನೋಟನ್ನು ನೀಡಿ ಚಿಲ್ಲರೆ ಪಡೆದು ಪರಾರಿಯಾಗುತ್ತಿದ್ದರು. ಇವರಿಂದ ಮೋಸಹೋದ ವ್ಯಾಪಾರಸ್ಥರು ಗುರುವಾರ ಅವರನ್ನು ಆಟೋದಲ್ಲಿ ನೋಡುತ್ತಿದ್ದಂತೆ ಬೆನ್ನಟ್ಟಿ ಹಿಡಿದು ದಾಬಸ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. 
SCROLL FOR NEXT