ರಾಜ್ಯ

ಮೈಸೂರು ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಬಾಲ ಕಾರ್ಮಿಕ ಇಲ್ಲ: ಸಮೀಕ್ಷೆ

Shilpa D
ಮೈಸೂರು: ಹಲವು ಜಿಲ್ಲೆಗಳ ಹಲವು ಭಾಗಗಳಲ್ಲಿ ಬಾಲ ಕಾರ್ಮಿಕರು ಕಾಣ ಸಿಗುವುದು ಸಾಮಾನ್ಯ. ಆದರೆ ಮೈಸೂರು ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಬಾಲ ಕಾರ್ಮಿಕ ಕೂಡ ಇಲ್ಲ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ ಸೊಸೈಟಿ ನಡೆಸಿದ ಸರ್ವೆ ಅಚ್ಚರಿಯ ಫಲಿತಾಂಶ ನೀಡಿದೆ, 2001 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮೈಸೂರು ಜಿಲ್ಲೆಯಲ್ಲಿ 360 ಬಾಲ ಕಾರ್ಮಿಕರು ಪತ್ತೆಯಾಗಿದ್ದರು. 
ಆದರೆ ಈ ಸಮೀಕ್ಷೆ ಅವೈಜ್ಞಾನಿಕ ಎಂದು ಹೇಳಿರುವ ಮೈಸೂರು ಡಿಸಿ  ಹಾಗೂ ಬಾಲ ಕಾರ್ಮಿಕ ಯೋಜನೆ ಸೊಸೈಟಿಯ ಅಧ್ಯಕ್ಷರೂ  ಆಗಿರುವ ಡಿ. ರಣದೀಪ್ ಮರು ಸಮೀಕ್ಷೆಗೆ ಆದೇಶಿಸಿದ್ದಾರೆ.
7 ತಾಲೂಕುಗಳಲ್ಲಿ ಕಾರ್ಮಿಕ ಇನ್ಸ್ ಪೆಕ್ಟರ್ ಗಳ ನೆರವಿನೊಂದಿಗೆ ವಿವಿಧ ಎನ್ ಜಿಒಗಳು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿವೆ. ಆದರೆ ಕಾರ್ಮಿಕ ಇಲಾಖೆ ಇನ್ಸ್ ಪೆಕ್ಟರ್ ಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಆದರೆ ಈ ಸಂಬಂಧ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಳು ಯಾವುದೇ ಪ್ರತಿಕ್ರಿಯೆ ನೀಡದೇ ಬಾಯಿ ಮುಚ್ಚಿ ಕುಳಿತಿದಿದ್ದಾರೆ.
SCROLL FOR NEXT